UN NETWORKS
ಅಸೈಗೋಳಿ : ಕೊಣಾಜೆ ಗ್ರಾಮದ ಅಸೈಗೋಳಿಯ ಶ್ರೀ ಅಯ್ಯಪ್ಪ ಮಂದಿರದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಶನಿವಾರ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಿಂದ ಅಸೈಗೋಳಿಯವರೆಗೆ ನಡೆಯಿತು.
ಹಸಿರು ಹೊರೆಕಾಣಿಕೆ ಮೆರವಣಿಗೆಯನ್ನು ಕೊಣಾಜೆ ಬೀಡು ಸತ್ಯನಾರಾಯಣ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೈವ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯ ಕ್ಕೆ ಅನುಸಾರವಾಗಿ ಕೊಡುಗೆ ನೀಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ಕಾರ್ಯ ಗಳಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇರಳಕಟ್ಟೆ ಅಯ್ಯಪ್ಪ ದೇವಾಲಯದ ಗುರುಸ್ವಾಮಿ ವಿಶ್ವನಾಥ ಕಾಯೆರ್ ಪಳಿಕೆ, ಉದ್ಯಮಿ ದೇವಣ್ಣ ಶೆಟ್ಟಿ, ಪುರುಷೋತ್ತಮ ಅಂಚನ್, ವಸಂತ್ ಶೆಟ್ಟಿ, ಮುಖಂಡರಾದ ರಾಜೇಶ್ ಶೆಟ್ಟಿ ಪಜೀರುಗುತ್ತು, ಪ್ರಶಾಂತ್ ಕಾಜವ, ಪ್ರಸಾದ್ ರೈ ಕಲ್ಲಿಮಾರ್, ಬ್ರಹ್ಮಕಲಶೋತ್ಸವ ಸಮಿತಿಯ ಶೀನ ಶೆಟ್ಟಿ, ರವೀಂದ್ರ ಪಟ್ಟೋರಿ, ತ್ಯಾಗಂ ಹರೇಕಳ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಸಿರು ಹೊರೆಕಾಣಿಕೆ ಮೆರವಣಿಗೆಯು ದೇರಳಕಟ್ಟೆ ಅಯ್ಯಪ್ಪ ದೇವಾಲಯದಿಂದ ಅಸೈಗೋಳಿಯವರೆಗೆ ಜಾನಪದ ದಿಬ್ಬಣದೊಂದಿಗೆ ವಿಜ್ರಂಭಣೆಯಿಂದ ನಡೆಯಿತು