Site icon Ullalavani

ಮೂರು ದಿನಗಳ ಹಿಂದಷ್ಟೇ ತಾಯಿ ಮನೆಗೆ ತೆರಳಿದ್ದರು !

UN NETWORKS

ಬಂಟ್ವಾಳ : ಬಂಟ್ವಾಳದ ಅಣ್ಣಳಿಕೆ-ಹಿರ್ಣಿ ನಡುವಿನ ಕುಮೇರ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತರಾದ ಮಹಿಳೆ ಪಂಡಿತ್‍ಹೌಸ್ ಪ್ರಕಾಶನಗರ ನಿವಾಸಿ ರಾಜೇಶ್ ಎಂಬವರ ಪತ್ನಿ ಜಯಲಕ್ಷ್ಮೀ (36) ಅವರು ಮೂರು ದಿನಗಳ ಹಿಂದಷ್ಟೇ ಬಂಟ್ವಾಳದ ಹಿರ್ಣಿಯಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಮಕ್ಕಳಿಗೆ ಶಾಲೆ ರಜೆಯಿರುವ ಹಿನ್ನೆಲೆಯಲ್ಲಿ ತೆರಳಿದ್ದರು. ಕೆಲ ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ದ ತನ್ನ ಸಹೋದರಿಯ ಪುತ್ರ ಸುರೇಂದ್ರ ಅವರಿಗೆ ಹುಡುಗಿ ನೋಡಲೆಂದು ಸ್ಥಳೀಯ ದೇವಸ್ಥಾನಕ್ಕೆ ಚಿಕ್ಕಮ್ಮನ ಜತೆಗೆ ಸುರೇಂದ್ರ ಬೈಕಿನಲ್ಲಿ ತೆರಳಿದ್ದರು.

ಈ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ರಾಜೇಶ್ – ಜಯಲಕ್ಷ್ಮೀ ದಂಪತಿಗೆ 5 ಮತ್ತು 10ರ ಹರೆಯದ ಇಬ್ಬರು ಇಳೆಯ ವಯಸ್ಸಿನ ಹೆಣ್ಮಕ್ಕಳಿದ್ದಾರೆ. ರಾಜೇಶ್ ಉಳ್ಳಾಲದ ಬೀಡಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

Exit mobile version