Site icon Ullalavani

ಉಳ್ಳಾಲ ಅರೆಬಿಕ್ ಕಾಲೇಜ್ ಫ್ರೊಫೆಸರ್ ಅಹ್ಮದ್ ಬಾವಾ ಮುಸ್ಲಿಯಾರ್ ನಿಧನ

UN NETWORKS

ಉಳ್ಳಾಲ : ಉಳ್ಳಾಲ ಸಯ್ಯದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಫ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್(82) ಅವರು ಸೋಮವಾರ ತಡರಾತ್ರಿ 2 ಗಂಟೆಯ ವೇಳೆಗೆ ಸ್ವಗೃಹದಲ್ಲಿ ನಿಧನರಾದರು.

ಉಳ್ಳಾಲ ಸೆಯ್ಯದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಫ್ರೊಫೆಸರ್ ಆಗಿ ಸುಮಾರು 49 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಕನ್ನಂಗಾರ್ ಜುಮಾ ಮಸೀದಿಯಲ್ಲಿ ಎರಡು ವರ್ಷ, ಬಜಪೆ ಮಸೀದಿಯಲ್ಲಿ ಒಂದು ವರ್ಷ, ಮೊಗ್ರಾಲ್ ಮಸೀದಿಯಲ್ಲಿ ಒಂದು ವರ್ಷ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ಉಳ್ಳಾಲ ಅರೆಬಿಕ್ ಕಾಲೇಜಿನಲ್ಲಿ ಫ್ರೊಫೆಸರ್‍ಆಗಿ ಸೇವೆಯಲ್ಲಿದ್ದ ವೇಳೆ 12 ವರ್ಷಗಳ ಕಾಲ ಮುಕಚೇರಿ ಅಬೂಬಕರ್ ಸಿದ್ದೀಕ್ ಮಸೀದಿಯಲ್ಲಿ ಖತೀಬ್ ಆಗಿ ದುಡಿದಿದ್ದರು. ಇವರು ತಮಿಳುನಾಡಿನ ದೇವಬಂಧು ಎಂಬಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು.

Exit mobile version