UN NETWORKS
ನರಿಂಗಾನ : ಗ್ರಾಮೀಣ ಭಾಗದ ಯುವಕ ಮಂಡಲವೊಂದು ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆಯುವುದರ ಜೊತೆಗೆ ಕಳೆದ ನಾಲ್ಕು ದಶಕಗಳಿಂದ ಸಮಾಜಮುಖಿ ಕೆಲಸ ಮಾಡುತ್ತಾ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಉದ್ಯಮಿ ಚಂದ್ರಹಾಸ್ ಪಂಡಿತ್‍ಹೌಸ್ ಅಭಿಪ್ರಾಯಪಟ್ಟರು.
ತೌಡುಗೋಳಿಯಲ್ಲಿರುವ ನರಿಂಗಾನ ಯುವಕ ಮಂಡಲದ ಕಲಾ ಮಂದಿರದಲ್ಲಿ ಶನಿವಾರ ನಡೆದ 41ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜಮುಖಿಯಾಗಿ ಕೆಲಸ ಮಾಡುವ ಯಾವುದೇ ಸಂಘಟನೆಗಳಲ್ಲೂ ಇರುವವರು ಒಂದೇ ಮನಸ್ಸು ಹೊಂದಿದ್ದರೆ ಅಂತಹ ಸಂಘ- ಸಂಸ್ಥೆಗಳು ಜನರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಜೊತೆಗೆ ಸಾಧಕರನ್ನು ಸನ್ಮಾನಿಸುತ್ತಾ ಅವರಿಂದಲೂ ಇನ್ನಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುವಂತೆ ಮಾಡುವ ಕಾರ್ಯ ನಿಜಕ್ಕೂ ಮೆಚ್ಚತಕ್ಕದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೊಂಟೆಪದವು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್ ಹಾಗೂ ತೌಡುಗೋಳಿಯ ಶ್ರೀ ಕಾವೀ ಸುಬ್ರಹ್ಮಣ್ಯ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ ಕೆ. ಅವರನ್ನು ಸನ್ಮಾನಿಸಲಾಯಿತು.
ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಮೊಕ್ತೇಸರ ಬಿ.ನಾರಾಯಣ ಶೆಟ್ಟಿ ಬಲೆತ್ತೋಡು, ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಚೌಟ, ಉದ್ಯಮಿ ಐತಪ್ಪ ಶೆಟ್ಟಿ ದೇವಂದಪಡ್ಪು, ಯೋಗೀಶ್ ಆಚಾರ್ಯ ಕೈರಂಗಳ, ಇರಾ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ಅಶ್ವತ್ಥಡಿ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯೆ ಹರಿಣಾಕ್ಷಿ ಕೊರಕಟ್ಟ, ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ, ಭಾಗವತ ಆನಂದ ಎಸ್.ಸರ್ಕುಡೇಲು, ಶಿಕ್ಷಕ ಲೋಕೇಶ್ ಎಸ್.ಸರ್ಕುಡೇಲು, ಯುವಕ ಮಂಡಲದ ಗೌರವಾಧ್ಯಕ್ಷ ಉದಯ ಶಂಕರ ಶೆಟ್ಟಿ ಬಲೆತ್ತೋಡು, ಮಾಜಿ ಅಧ್ಯಕ್ಷರುಗಳಾದ ವಿನೋದ್ ಸುವರ್ಣ ನಿಡ್ಮಾಡ್, ನವೀನ್ ಶೆಟ್ಟಿ ಮಂಗಲ್ಪಾಡಿ, ದಿನೇಶ್ ಆಳ್ವ ಗರೋಡಿ, ವಿಜಯ್ ಎಲ್. ಸರ್ಕುಡೇಲು, ಅವಿನಾಶ್ ಸರ್ಕುಡೇಲು, ಪರಶು ತೌಡುಗೋಳಿ, ರಾಕೇಶ್ ಕೊರಕಟ್ಟ, ಶ್ರೀಕುಮಾರ್ ಸರ್ಕುಡೇಲು, ಪದ್ಮನಾಭ ಸರ್ಕುಡೇಲು, ಜೀತೇಶ್ ಶೆಟ್ಟಿ ಪೂಂಜರ ಮನೆ, ಗೌತಮ್ ಕುಲಾಲ್ ತೌಡುಗೋಳಿ, ಜಗದೀಶ್ ಆಳ್ವ ಗರೋಡಿ, ಆನಂದ ನೀರೊಳಿಕೆ, ಜಗದೀಶ್ ನಾಯ್ಕ್ ನೀರೊಳಿಕೆ , ಕೌಶಿಕ್ ತೌಡುಗೋಳಿ, ವಿಜಯ್ ಆರ್. ಸರ್ಕುಡೇಲು, ಶ್ರವಣ್ ಕುಮಾರ್ ಸರ್ಕುಡೇಲು ಹಾಗೂ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ ಮೊದಲಾದವರು ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್.ಸರ್ಕುಡೇಲು ವರದಿ ವಾಚಿಸಿದರು. ಪುನೀತ್ ಶೆಟ್ಟಿ ಪುಳಿಂಕೆತ್ತಡಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.