Site icon Ullalavani

ಮಂಗಳೂರು: ಕಟ್ಟಿ ಹಾಕಿದ್ದ ಬೋಟಿನ ಹಗ್ಗ ತುಂಡರಿಸಿದ ದುಷ್ಕರ್ಮಿಗಳು

UN NETWORKS

ಉಳ್ಳಾಲ : ಹಳೆ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಕಟ್ಟಿ ಹಾಕಿದ್ದ ಮೀನುಗಾರಿಕಾ ಬೋಟಿನ ಹಗ್ಗ ತುಂಡಾಗಿ ಉಳ್ಳಾಲದ ಅಳಿವೆಬಾಗಿಲು ಸಮೀಪ ಬಂಡೆಗಳಿಗೆ ಸಿಲುಕಿ ಬೋಟು ಮುಳುಗಡೆಯಾಗಿದೆ.

ಹಗ್ಗವನ್ನು ದುಷ್ಕರ್ಮಿಗಳು ತುಂಡರಿಸಿದ್ದಾರೆ ಅನ್ನುವ ಸಂಶಯ ಬೋಟ್ ಮಾಲೀಕರು ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ `ಪ್ರಾವಿಡೆನ್ಸ್’ ಹೆಸರಿನ ಮೀನುಗಾರಿಕಾ ಟ್ರಾಲ್‍ಬೋಟ್ ಇದಾಗಿದೆ. ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಂದು ಸಂಶಯಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್ ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಇದರಿಂದಾಗಿ ಬೋಟ್ ಮಾಲಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಬೋಟ್ ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲಕರು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Exit mobile version