Site icon Ullalavani

ಮಾಡೂರು: ರಂಜಾನ್ ಕಿಟ್ ವಿತರಣೆ

UN NETWORKS

ಮಾಡೂರು : ರಂಜಾನ್ ತಿಂಗಳಲ್ಲಿ ಕಿಟ್ ವಿತರಣೆಯಂತಹ ಕಾರ್ಯಕ್ರಮವನ್ನು ಮಾಡೂರು ಗಲ್ಫ್ ಫ್ರೆಂಡ್ಸ್ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಇದರಿಂದ ಬಹಳಷ್ಟು ಬಡ ಕುಟುಂಬಗಳಿಗೆ ಸಹಕಾರಿಯಾಗಲಿದೆ. ಇಂತಹ ಕಾರ್ಯ ಇನ್ನು ಕೂಡಾ ಯಶಸ್ವಿಯಾಗಲಿ ನಡೆಯಲಿ ಎಂದು ಮಾಡೂರು ಇಮಾಮುದ್ದೀನ್ ಜುಮಾ ಮಸೀದಿ ಖತೀಬ್ ಬಶೀರ್ ಅಹ್ಸನಿ ತೋಡಾರು ಹೇಳಿದರು.

ಅವರು ಮಾಡೂರು ಜುಮಾ ಮಸೀದಿ ಬಳಿ ಮಾಡೂರು ಗಲ್ಫ್ ಫ್ರೆಂಡ್ಸ್ ಆಶ್ರಯದಲ್ಲಿ ಭಾನುವಾರ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು. ಕೋಟೆಕಾರ್ ಪ.ಪಂ. ಕೌನ್ಸಿಲರ್ ಹಮೀದ್ ಹಸನ್ ಮಾಡೂರು ಮಾತನಾಡಿ. ವಿದೇಶದಲ್ಲಿರುವ ಮಾಡೂರಿನ ಯುವಕರು ಸಂಘಟಿತರಾಗಿ ಕಿಟ್ ವಿತರಣೆಯಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಇದಕ್ಕೆ ಊರಿನ ಎಲ್ಲ ಜನರು ಕೈಜೋಡಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದರು.

ಜಾಹೀರಾತು

ಮಾಡೂರು ಗಲ್ಫ್ ಫ್ರೆಂಡ್ಸ್‍ನ ಅಧ್ಯಕ್ಷ ಎಂ.ಎ. ಶಾಕೀರ್, ಉಪಾಧ್ಯಕ್ಷ ಹಫೀಝ್, ಮಾಡೂರು ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್, ಅಬ್ದುಲ್ ರಹ್ಮಾನ್, ಅರಬ್ಬಿ ಹಾಜಿ, ಹಝ್ರತ್ ಕ್ವಾರೀ ಇರ್ಫಾನ್, ಎಂ.ಎ. ಬಶೀರ್, ಹಸೈನಾರ್ ಬಾಪಕುಂಞ, ಶೇಖ್ ಅನ್ವರ್ , ನಝೀರ್ ಮಾಡೂರು ಮೊದಲಾದವರು ಉಪಸ್ಥಿತರಿದ್ದರು.

Exit mobile version