Site icon Ullalavani

ಹಿದಾಯತ್ ನಗರ ಎಸ್ಸೆಸ್ಸೆಫ್ ವತಿಯಿಂದ ಇರ್ಷಾದಿಯ್ಯ 2ಕೆ19 ಶಿಬಿರ

UN NETWORKS

ಉಳ್ಳಾಲ : ಸಮುದ್ರದಲ್ಲಿ ಎಲ್ಲಾ ಚಿಪ್ಪಿನಲ್ಲೂ ಮುತ್ತು ಇರುವುದಿಲ್ಲ, ಅದೇ ರೀತಿ ಪ್ರತಿಭೆ ಎಂಬುದೂ ಎಲ್ಲರಲ್ಲೂ ಇರೋದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಶಿಬಿರಗಳ ಮೂಲಕ ಪ್ರತಿಭೆಯನ್ನು ಹೊರಹಾಕಬಹುದು ಎಂದು ಕೆ.ಸಿ.ರೋಡು ಎಸ್ ವೈಎಸ್ ಅಧ್ಯಕ್ಷ ಎನ್.ಎಸ್.ಉಮರಬ್ಬ ಮಾಸ್ಟರ್ ಅಭಿಪ್ರಾಯಪಟ್ಟರು.

ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖೆಯ ವತಿಯಿಂದ ಭಾನುವಾರ ಹಿದಾಯತ್ ನಗರ ಮದರಸ ಸಭಾಂಗಣದಲ್ಲಿ ನಡೆದ ಇರ್ಷಾದಿಯ್ಯ 2ಕೆ19 ಕಾರ್ಯಾಗಾರದ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಸಂಪನ್ಮೂಲ ವ್ಯಕ್ತಿಗಳು ಹೇಳಿದ ಮಾತುಗಳನ್ನು ಮನಸ್ಸಿಟ್ಟು ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮನೆ, ಕುಟುಂಬ,‌ ಸಮಾಜ ಹಾಗೂ ದೇಶದ ಉತ್ತಮ ಪ್ರಜೆಯಾಗಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.

ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖಾಧ್ಯಕ್ಷ ಶಬೀರ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ವಲಯ ಕೋಶಾಧಿಕಾರಿ ಜಿ.ಎ.ಇಬ್ರಾಹಿಂ, ಹಿದಾಯತ್ ನಗರ ಮಸೀದಿಯ ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಸಖಾಫಿ ಹಾಗೂ ಖತೀಬ್ ಅಹ್ಮದ್ ಕಬೀರ್ ಸಾದಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅಲ್ ಹಿದಾಯ‌ ಜುಮಾ ಮಸೀದಿಯ ಕಾರ್ಯದರ್ಶಿ ಝಾಕೀರ್ ಹಿದಾಯತ್ ನಗರ, ಮದರಸ‌‌ ಮುಅಲ್ಲಿಂಮರಾದ ಅಶ್ರಫ್ ಅಮ್ಜದಿ, ಅಬ್ದುಲ್ ರಹೀಂ ಝುಹ್ರಿ, ಎಸ್ಸೆಸ್ಸೆಫ್ ಉಪಾಧ್ಯಕ್ಷ ಝುಬೈರ್ ಝುಹ್ರಿ, ಇಬ್ರಾಹಿಂ ಮುಸ್ಲಿಯಾರ್ ಹಿದಾಯತ್ ನಗರ, ಕೋಟೆಕಾರ್ ಎಸ್ಸೆಸ್ಸೆಫ್ ಅಧ್ಯಕ್ಷ ಸಿದ್ದೀಕ್ ಕೊಮರಂಗಳ ಉಪಸ್ಥಿತರಿದ್ದರು.

ಜಾಹೀರಾತು

ಎಸ್ಸೆಸ್ಸೆಫ್ ಜೊತೆಕಾರ್ಯದರ್ಶಿ ಲಿಬಾನ್ ಮರ್ಝೂಕಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ವಂದಿಸಿದರು.

Exit mobile version