ಉಳ್ಳಾಲ : ಯು.ಟಿ.ಫರೀದ್ ಪೌಂಡೇಶನ್ ಹಾಗೂ ಕೆರೆಬೈಲ್ ಫ್ರೆಂಡ್ಸ್ ಸರ್ಕಲ್ ಇದರ ಜಂಟಿ ಆಶ್ರಯದಲ್ಲಿ ನಡೆದ ಕೆರೆಬೈಲ್ ಪ್ರೀಮಿಯರ್ ಲೀಗ್-2, ಕ್ರಿಕೆಟ್ ಪಂದ್ಯಾಟದಲ್ಲಿ ಈಗಲ್ ಐಸ್ ತಂಡ ಪ್ರಶಸ್ತಿ ಪಡೆಯಿತು. ಈವ್ನಿಂಗ್ ಸ್ಟಾರ್ ತಂಡ ರನ್ನರ್ಸ್ ಆಗಿ ಹೊರಹೊಮ್ಮಿತು.
ಪ್ರಶಸ್ತಿ ಪಡೆದ ತಂಡಕ್ಕೆ ಶಾಶ್ವತ ಟ್ರೋಫಿ ಮತ್ತು ಟಿವಿಎಸ್ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಯಿತು. ಚೆಂಬುಗುಡ್ಡೆಯ ಖಾಸಗಿ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಓವರ್ಸಿಸ್ ಕಾಂಗ್ರೆಸ್‍ನ ಮಧ್ಯಪ್ರಾಚ್ಯ ಅಧ್ಯಕ್ಷ ಅಬ್ದುಲ್ ಶಕೀಲ್ ಬಹುಮಾನವನ್ನು ವಿತರಿಸಿದರು. ಯು.ಟಿ ಫರೀದ್ ಪೌಂಡೇಶನ್‍ನ ಯು.ಟಿ.ಇಫ್ತಿಕಾರ್ ಆಲಿ, ಕಣಚೂರು ಗ್ರೂಪ್ ನಿರ್ದೇಶಕ ಅಬ್ದುಲ್ ರಹ್‍ಮಾನ್, ಉದ್ಯಮಿಗಳಾದ ಅಬ್ದುಲ್ ರವೂಫ್, ಆಸಿಫ್ ಸೀಕೋ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮ ಸಂಘಟಕ ಅಶ್ರಫ್ ಕೆರೆಬೈಲ್ ಸ್ವಾಗತಿಸಿದರು. ಸಾಗರ್ ಅಬ್ದುಲ್ ರಹಮಾನ್ ಕಾರ್ಯಕ್ರಮ ನಿರೂಪಿಸಿದರು.