Site icon Ullalavani

ಯೇನೆಪೊಯ :ಸೆನ್ಸಿಟೈಝಷನ್- ಸಿಸ್ಟಮ್ಯಾಟಿಕ್ ರಿವ್ಯೂ ಮತ್ತು ಮೆಟಾ -ಅನಾಲಿಸಿಸ್ ವಿಚಾರದಲ್ಲಿ ಕಾರ್ಯಾಗಾರ

UN NETWORKS

ದೇರಳಕಟ್ಟೆ: ಯೇನೆಪೊಯ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಸೆನ್ಸಿಟೈಝಷನ್- ಸಿಸ್ಟಮ್ಯಾಟಿಕ್ ರಿವ್ಯೂ ಮತ್ತು ಮೆಟಾ -ಅನಾಲಿಸಿಸ್ ವಿಚಾರದಲ್ಲಿ ಕಾರ್ಯಾಗಾರ ಯೇನೆಪೊಯ ವಿವಿ ಕ್ಯಾಂಪಸ್‍ನಲ್ಲಿ ನಡೆಯಿತು. ಯೇನೆಪೊಯ ವಿವಿ ಸಹ ಕುಲಾಧಿಪತಿ ಡಾ| ಸಿ ವಿ ರಘುವೀರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಯೇನೆಪೊಯ ವಿವಿ ಕುಲಸಚಿವ ಡಾ| ಗಂಗಾಧರ ಸೋಮಯಾಜಿ, ಯೇನೆಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಲೀನಾ ಕೆ ಸಿ, ಮಣಿಪಾಲ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಡಾ| ರಮೇಶ್ ಸಿ. ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಕಾಲೇಜಿನ 72 ಪ್ರತಿನಿಧಿಗಳು ಭಾಗವಹಿಸಿದ್ದರು. ವಿಭಾಗದ ಮುಖ್ಯಸ್ಥೆ ಪ್ರೊ| ಉಮಾರಾಣಿ ಜೆ ಸ್ವಾಗತಿಸಿದರು. ಕಾರ್ಯದರ್ಶಿ ಮೆಲ್ಬ ಲೋಬೊ ವಂದಿಸಿದರು.

ಜಾಹೀರಾತು
Exit mobile version