Site icon Ullalavani

ಕೆಸಿಎಫ್ ಕುವೈತ್ ಜಹರಾ ಸೆಕ್ಟರ್ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಕೋಡಿಬೈಲ್ ಪುನರಾಯ್ಕೆ

UN NETWORKS

ಕುವೈತ್ : ಕೆಸಿಎಫ್ ಕುವೈತ್ ಜಹರಾ ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ಜ ಹರಾ ಫಾರೂಕ್ ಬಾಯಿ ರವರ ನಿವಾಸದಲ್ಲಿ  ಬಾದುಷ ಸಖಾಫಿ  ಉಸ್ತಾದರ ದುವಾದೊಂದಿಗೆ ಮಾಸಿಕ ಸ್ವಲಾತ್ ಮಜ್ಲಿಸ್ ಆರಂಭವಾಯಿತು.

ಅಧ್ಯಕ್ಷತೆಯನ್ನು ಜಹರಾ ಸೆಕ್ಟರ್ ನ  ಅಧ್ಯಕ್ಷರಾದ ಅಬ್ದುಲ್ ಲತೀಫ್ ಕೋಡಿಬೈಲ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೆಸಿಎಫ್ ಕುವೈತ್ NRD ಕನ್ವೀನರ್ ಮುಸ್ತಫಾ ಉಳ್ಳಾಲ,ಕೆಸಿಎಫ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರ್, ಕುವೈತ್  ರಾಷ್ಟ್ರೀಯ ಸಾಂತ್ವಾನ ಕನ್ವೀನರ್ ಇಕ್ಬಾಲ್ ಕಂದಾವರ,ಕೆಸಿಎಫ್ ಕುವೈತ್ ಫರ್ವಾನಿಯ ಸೆಕ್ಟರ್ ಅಧ್ಯಕ್ಷರಾದ ಹೈದರ್ ಪಟ್ಟೋರಿ,ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಕೋರಿದ ಜಹರಾ ಸೆಕ್ಟರ್  ಕಾರ್ಯದರ್ಶಿ ಶಂಸುದ್ದೀನ್ ಕಾಪು  ವರದಿ ವಾಚಿಸಿ. ಲೆಕ್ಕ ಪತ್ರ ಮಂಡಿಸಿದರು.ಸೆಕ್ಟರ್ ಪುನರ್ರಚನೆ ಹಾಗೂ ನೂತನ ಪಧಾದಿಕಾರಿಗಳನ್ನು R.O ಆಗಿ ಬಂದ  ಕೆಸಿಎಫ್ ರಾಷ್ಟ್ರೀಯ NRD ಕನ್ವೀನರ್  ಮುಸ್ತಫಾ ಉಳ್ಳಾಲ ಹಾಗೂ ಕೆಸಿಎಫ್  ಕುವೈತ್  ರಾಷ್ಟ್ರೀಯ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರ್ ಅವರ ನೇತ್ರತ್ವದಲ್ಲಿ ಹೊಸ ಸಮಿತಿ ರಚಿಸಲಾಯಿತು.ಬಹುಮಾನ್ಯ ಬಾದುಷ ಸಖಾಫಿ ಉಸ್ತಾದರು  ಕೌನ್ಸಿಲ್ ನಡೆಸಿ ಸಂಘಟನೆಯ ಜವಾಬ್ದಾರಿಯುತ ನಾಯಕರು ಮಾಡಬೇಕಾದ ಸೇವೆ, ಅದರ ಮಹತ್ವದ ಬಗ್ಗೆ    ವಿವರಿಸಿದರು. ಹಾಗೂ ಭಕ್ತಿ ನಿರ್ಭಯ ದುವಾದೊಂದಿಗೆ ಕೊನೆಗೊಂಡಿತು.

ನೂತನ  ಸಾರಥಿಗಳಾಗಿ
ಅಧ್ಯಕ್ಷರು – ಅಬ್ದುಲ್ ಲತೀಫ್ ಕೊಡಿಬೈಲ್ ಪ್ರಧಾನ ಕಾರ್ಯದರ್ಶಿ – ಶಂಶುದ್ದೀನ್ ಕಾಪು ಕೋಶಾಧಿಕಾರಿ – ಜಲಾಲ್ ಸಾಸ್ತಾನ..
ಶಿಕ್ಷಣ ಅಧ್ಯಕ್ಷರು – ಇಕ್ಬಾಲ್ ಸರಳಿಕಟ್ಟೆಶಿಕ್ಷಣ ಕಾರ್ಯದರ್ಶಿ – ರಫೀಕ್ ಬಿ ಸಿ ರೋಡ್ 
ಸಾಂತ್ವನ ಅಧ್ಯಕ್ಷರು – ಅಬ್ಬಾಸ್ ಪಾಳ್ಯ ಸಾಂತ್ವನ ಕಾರ್ಯದರ್ಶಿ – ರಿಯಾಜ್ ಸೊಂಟಿಕೊಪ್ಪ 
ಪ್ರಕಾಶನ ಅಧ್ಯಕ್ಷರು – ಸ್ವಫ್ವಾನ್ ಮಂಗಳೂರಪ್ರಕಾಶನ ಕಾರ್ಯದರ್ಶಿ – ನವಾಜ್ ಸರಳಿಕಟ್ಟೆ ಹಾಗೂ ಹನ್ನೆರಡು  ಮಂದಿ  ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಲಾಯಿತು.

Exit mobile version