UN NETWORKS
ದೇರಳಕಟ್ಟೆ : SKSSF ದೇರಳಕಟ್ಟೆ ಶಾಖೆಯ ವತಿಯಿಂದ ಶಾಖಾ ಕಚೇರಿಯಲ್ಲಿ ಶಂಸುಲ್ ಉಲಮಾ ಮೌಲಿದ್ ಮಜ್ಲಿಸ್ ಹಾಗೂ ರಮಳಾನ್ ಸ್ವಾಗತ ಕಾರ್ಯಕ್ರಮ ನಡೆಯಿತು.
SKSSF ದೇರಳಕಟ್ಟೆ ಶಾಖಾ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ ರವರ ಆದ್ಯಕ್ಷತೆಯಲ್ಲಿ ನಡೆದಕಾರ್ಯಕ್ರಮದಲ್ಲಿ SKSSF ಕೇಂದ್ರ ಸಮಿತಿ ಸದಸ್ಯರಾದ ಬಹು ತಬೂಕ್ ದಾರಿಮಿ ರವರು ಮೌಲಿದ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು. SKSSF ಮಂಗಳೂರು ವಲಯ ಸಮಿತಿ ಪ್ರದಾನ ಕಾರ್ಯದರ್ಶಿ ಹಾಫಿಲ್ ಝೈನ್ ಸಖಾಫಿ ಉಳ್ಳಾಲ ಮುಖ್ಯ ಪ್ರಭಾಷಣವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಮಂಗಳ ನಗರ ಮಸ್ಜಿದುನ್ನೂರ್ ಮಸೀದಿ ಖತೀಬ್ ಬಹು ತ್ವಯಿಬ್ ಫೈಝಿ.,ಅರಫಾ ಮಸೀದಿ ಇಮಾಮರಾದ ಇಸ್ಹಾಕ್ ಫೈಝಿ, SKSSF ದೇರಳಕಟ್ಟೆ ಕ್ಲಸ್ಟರ್ ಸಮಿತಿ ಅಧ್ಯಕ್ಷರಾದ ಸಯ್ಯದ್ ಅಲಿ SKSSF ಮಾಜಿ ಅಧ್ಯಕ್ಷರಾದ ಹಾಜಿ ಕೆರೀಮ್ ಡಿ. ಮೊಹಮ್ಮದ್ ಡಿ.ಎಂ ಮುಂತಾದ ಹಲವಾರು ಗಣ್ಯರು ಬಾಗವಹಿದರು.
ಕಾರ್ಯಕ್ರಮದಲ್ಲಿ SKSSF ದೇರಳಕಟ್ಟೆ ಶಾಖೆ ಯ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮುನ್ಸಿದ್ ಸ್ವಾಗತಿಸಿ ವಂದಿಸಿದರು.