Site icon Ullalavani

ಕಿನ್ಯ ಸ್ವಲಾತ್ ವಾರ್ಷಿಕೋತ್ಸವ

UN NETWORKS

ಉಳ್ಳಾಲ : ಪ್ರವಾದಿಯವರ ತತ್ವಾದರ್ಶಗಳನ್ನು ಪಾಲಿಸದಿದ್ದರೆ ಇಸ್ಲಾಂನಲ್ಲಿ ರಕ್ಷಣೆ ಸಾಧ್ಯವಿಲ್ಲ. ಅಲ್ಲಾಹನಿಗೆ, ಪ್ರವಾದಿ ಮತ್ತು ಹಿರಿಯರಿಗೆ ಗೌರವ ನೀಡಿ ಬದುಕುವ ಕೆಲಸ ನಮ್ಮದಾಗಬೇಕು. ಅಕ್ರಮಗಳಿಗೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಅದು ಧಾರ್ಮಿಕ ಚೌಕಟ್ಟು ಮೀರಿದ ಕೆಲಸವಾಗಿದೆ. ಪರಲೋಕ ರಕ್ಷಣೆಗಾಗಿ ನಾವು ಪ್ರಾರ್ಥನೆ ಮಾಡಬೇಕಾಗಿದೆ ಎಂಧು ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಹೇಳಿದರು.

ಅವರು ಬುಖಾರಿ ಜುಮಾ ಮಸೀದಿಯ ಕಿನ್ಯ ಇದರ ವತಿಯಿಂದ ಶನಿವಾರ ನಡೆದ ಸ್ವಲಾತ್ ವಾರ್ಷಿಕದ ನೇತೃತ್ವ ವಹಿಸಿ ಮಾತನಾಡಿದರು. ಸಯ್ಯದ್ ಆಲವಿ ತಂಙಳ್ ದುವಾ ನೆರವೇರಿಸಿದರು. ಉಸ್ಮಾನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಿನ್ಯ ಜುಮಾ ಮಸೀದಯ ಅಧ್ಯಕ್ಷರಾಗಿ ಆಯ್ಕೆಯಾದ ಕೆಸಿ ಇಸ್ಮಾಯಿಲ್ ಹಾಜಿ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ಖಾದರ್ ಕುತುಬಿನಗರ್ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ವೇದಿಕೆಯಲ್ಲಿ ಅಬ್ಬಾಸ್ ಹಾಜಿ ನಾಟೆಕಲ್, ಕೆ.ಎಂ. ಸಿದ್ದೀಕ್ ಮೀಂಪ್ರಿ, ಇಬ್ರಾಹಿಂ ಹಾಜಿ, ಅಹ್ಮದ್ ಕಂಞ, ಇಬ್ರಾಹಿಂ ಹಾಜಿ ಕುತುಬಿನಗರ, ಹಮೀದ್ ಕಿನ್ಯ, ಕೆಸಿ ಇಸ್ಮಾಯಿಲ್ ಕಿನ್ಯ, ಅಬ್ದುಲ್ ಖಾದರ್ , ಅಬ್ದುಲ್ ರಹ್ಮಾನ್ ಸಅದಿ, ಶೌಕತ್ ಸಖಾಫಿ, ಕೆ.ಎಚ್. ಇಸ್ಮಾಯಿಲ್ ಸಅದಿ, ರಝಾಕ್ ಹಾಜಿ ನಾಟೆಕಲ್, ಮುಹಮ್ಮದ್ ನಡುದಾರಿ, ಉಸ್ಮಾನ್ ಝುಹ್ರಿ, ಪತ್ರಕರ್ತ ಬಶೀರ್ ಕಲ್ಕಟ್ಟ, ಫಯಾಝ್, ಮೂಸಕುಂಞ, ಅಶ್ರಫ್ ಮೊದಲಾದವರು ಇದ್ದರು. ಮಹೆಬೂಬ್ ಸಖಾಫಿ ಸ್ವಾಗತಿಸಿದರು.

Exit mobile version