UN NETWORKS
ಉಳ್ಳಾಲ: ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಸುಧಾಕರ್(55) ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 30 ವರ್ಷಗಳಿಂದ ಖಾಸಗಿ ಬಸ್ಸಿನಲ್ಲಿ ಕ್ಲಿನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಧಾಕರ್ ಈ ಹಿಂದೆಯೂ ಮನೆಯಿಂದ ಹೊರ ಹೋದರೆ ಮೂರು ನಾಲ್ಕು ತಿಂಗಳು ಕಳೆದು ಮನೆಗೆ ಬರುತ್ತಿದ್ದರು. 2018ರ ಅಕ್ಟೋಬರ್ 19ರಂದು ಮೊಬೈಲ್ ಮನೆಯಲ್ಲಿಟ್ಟು ಬೆಂಗಳೂರಿಗೆ ತೆರಳಿರುವ ಸುಧಾಕರ್ ಈವರೆಗೆ ಮನೆಗೆ ಬಾರದೆ ದೂರವಾಣಿ ಸಂಪರ್ಕವನ್ನು ಮಾಡಿಲ್ಲ ಮತ್ತು ಯಾವುದೇ ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.