Site icon Ullalavani

ಶ್ರೀಲಂಕಾ ದಾಳಿ ತೊಕ್ಕೊಟ್ಟುವಿನಲ್ಲಿ ಸಂತಾಪ-ಖಂಡನಾ ಸಭೆ

UN NETWORKS

ತೊಕ್ಕೊಟ್ಟು: ಉಗ್ರರ ಕೃತ್ಯವನ್ನು ವಿಶ್ವವೇ ಖಂಡಿಸುತ್ತದೆ. ಕರ್ನಾಟಕದ 10 ಸೇರಿದಂತೆ ಜಿಲ್ಲೆಯ ಒಬ್ಬರು ಮಹಿಳೆ ಸಾವನ್ನಪ್ಪಿರುವುದು ತೀರಾ ದು:ಖಕರ, ಮೃತರ ಆತ್ಮಕ್ಕೆ ಶಾಂತಿಯನ್ನು ಒದಗಿಸಲು ಎಲ್ಲರೂ ಪ್ರಾರ್ಥಿಸುವುದಾಗಿ ಎಂದು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ ಹೇಳಿದರು.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಚರ್ಚ್ ದಾಳಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಮತ್ತು ಯುವ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಶುಕ್ರವಾರ ಜರಗಿದ ಬೃಹತ್ ಸಂತಾಪ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್ ಮಾತನಾಡಿ, ಉಗ್ರರ ಹೀನಾಯ ಕೃತ್ಯದಿಂದ ಆಗುತ್ತಿರುವ ಪರಿಸ್ಥಿತಿಯನ್ನು ವಿಶ್ವದಾದ್ಯಂತ ವಿವಿಧ ದೇಶಗಳು ಒಗ್ಗೂಡಿ ಪರಿಹರಿಸಬೇಕಿದೆ. ಮೃತರ ಕುಟುಂಬಗಳಿಗೆ ದು:ಖ ಸಹಿಸುವ ಶಕ್ತಿ ದೇವರು ನೀಡಲಿ. ಮೃತರ ಕುಟುಂಬಗಳಿಗೆ ಸರಕಾರ ಸಹಾಯಹಸ್ತವನ್ನು ನೀಡಬೇಕಿದೆ. ಬಡ ಕುಟುಂಬದವರೂ ಸಾವನ್ನಪ್ಪಿರುವುದು ದುರಾದೃಷ್ಟ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಆಲ್ವಿನ್ ಡಿ.ಸೋಜ, ಪ್ರ. ಕಾರ್ಯದರ್ಶಿ ಬಾತಿಸ್, ದಿನೇಶ್ ಕುಂಪಲ, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜ, ಹುಸೈನ್ ಕುಂಞಮೋನು ಸದಸ್ಯರುಗಳಾದ ಶಶಿಕಲಾ, ವೀಣಾ ಡಿ.ಸೋಜ ಮತ್ತು ಮುಖಂಡರುಗಳಾದ ಇಸ್ಮಾಯಿಲ್, ಅಜೀಜ್ ಮಾಡೂರು ವಿಲ್ಮಾ, ಮನ್ಸೂರು, ಜಾನ್ ,ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಹಮೀದ್ ಹಸನ್ ಮಾಡೂರು, ಪುಷ್ಠಿ ಮಹಮ್ಮದ್, ಡೇನಿಸ್ ಡಿ.ಸೋಜ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪಿ.ಎಚ್. ಇಸ್ಮಾಯಿಲ್ ಝಕಾರಿಯಾ, ಅಹಮ್ಮದ್ ಅಜ್ಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

Exit mobile version