Site icon Ullalavani

ಅಸೈಗೋಳಿ : ಭಜನಾ ಸಂಕೀರ್ತನೆ ಉದ್ಘಾಟನೆ

UN NETWORKS

ಅಸೈಗೋಳಿ: ಯಾವುದೇ ಒಂದು ಕ್ಷೇತ್ರಕ್ಕೆ ಕಳೆ ಬರಬೇಕಾದರೆ ಅಲ್ಲಿ ನಿರಂತರ ಭಜನಾ ಕಾರ್ಯಕ್ರಮ ನಡೆಸುವುದು ಉತ್ತಮ ಎಂದು ಅಯ್ಯಪ್ಪಸ್ವಾಮಿ ಮಂದಿರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಚೌಟ ಅಭಿಪ್ರಾಯಪಟ್ಟರು.

ಅಸೈಗೋಳಿ ಶ್ರೀ ಅಯ್ಯಪ್ಪಸ್ವಾಮಿ ಮಂದಿರದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಎ.23ರಿಂದ ಮೇ 10ರವರೆಗೆ ನಡೆಯಲಿರುವ ಭಜನಾ ಸಂಕೀರ್ತನೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆರ್ಥಿಕ ಸಮಿತಿ ಸಂಚಾಲಕ ಮಂಜುನಾಥ ಆಳ್ವ, ಭಜನಾ ಸಂಚಾಲಕ ಗಣೇಶ್ ಅಸೈಗೋಳಿ ಸೈಟ್, ಸ್ವಾಗತ ಸಮಿತಿ ಸಂಚಾಲಕ ನಾರಾಯಣ ರೈ ಕಕ್ಕೆಮಜಲು, ಪ್ರಧಾನ ಕಾರ್ಯದರ್ಶಿ ಚೇತನ್ ಅಸೈಗೋಳಿ, ಮಹಿಳಾ ಸಂಚಾಲಕಿ ದೇವಕಿ ಉಪಸ್ಥಿತರಿದ್ದರು.

ಆನಂದ ಕೆ. ಅಸೈಗೋಳಿ ಸ್ವಾಗತಿಸಿದರು. ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ ವಂದಿಸಿದರು. ಶಿವಪ್ರಸಾದ್ ಕಕ್ಕೆಮಜಲು ಕಾರ್ಯಕ್ರಮ ನಿರೂಪಿಸಿದರು.

Exit mobile version