Site icon Ullalavani

ಮಂಗಳಗಂಗೋತ್ರಿ: ಪದವಿ ಕೋರ್ಸುಗಳಿಗೆ ಅರ್ಜಿಆಹ್ವಾನ


ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿರುವ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿ.ಯು.ಸಿ ಅಥವಾ ತತ್ಸಮಾನ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ 2019-20ರ ಶೈಕ್ಷಣಿಕ ವರ್ಷದ ಬಿ.ಎ., ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

ಅರ್ಜಿ ಪತ್ರ ಹಾಗೂ ಕೈಪಿಡಿಯನ್ನು ಮಂಗಳಗಂಗೋತ್ರಿ (ಕೊಣಾಜೆ)ಯ ಗ್ರಂಥಾಲಯ ಹಿಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ಕಚೇರಿಯಿಂದ ಬೆಳಿಗ್ಗೆ 10ರಿಂದ ಸಂಜೆ 3.30 ಗಂಟೆಯೊಳಗೆ ಪಡೆದು ಕೊಳ್ಳಬಹುದು. ಭರ್ತಿಮಾಡಿದ ಅರ್ಜಿ ಪತ್ರಗಳನ್ನು ನೀಡಲು ದಿನಾಂಕ- 06, ಮೇ 2019 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 0824-2287326 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Exit mobile version