Site icon Ullalavani

ಕೆಸಿಎಫ್ ಮದೀನಾ ಮುನವ್ವರದ,ವಾರ್ಷಿಕ ಮಹಾಸಭೆ

UN NETWORKS

ಮದೀನಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಝೋನ್ ಸಮಿತಿಯ ದ್ವೈವಾರ್ಷಿಕ ಮಹಾಸಭೆಯು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.

ಕೆಸಿಎಫ್ ಐ.ಎನ್.ಸಿ ಶಿಕ್ಷಣ ವಿಭಾಗ ಕನ್ವೀನರ್ ಕಮರುದ್ದೀನ್ ಗೂಡಿನಬಳಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ಮದೀನಾ ಝೋನ್ ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ಗರಿಷ್ಟ ಗುಣಮಟ್ಟ ಹೊಂದಿದವರಾಗಿದ್ದಾರೆ. ಹಜ್ಜ್ ಸಮಯದಲ್ಲಿ ಮದೀನಾ ಹೆಚ್.ವಿ.ಸಿ ಕಾರ್ಯಕರ್ತರ ನಿಸ್ವಾರ್ಥ ಸೇವೆಯು, ಸೌದಿ ಅರೇಬಿಯಾ ಮಾತ್ರವಲ್ಲ, ಅಂತರಾಷ್ಟ್ರೀಯ (ಐ.ಎನ್.ಸಿ) ಮಟ್ಟದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗೊಂಡಿದೆ ಎಂದರು. ಹುಸೈನಾರ್ ಉರುವಾಲ್ ಪದವು ಗತ ವರ್ಷದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಝೋನ್ ರೀ ಆರ್ಗನೈಸಿಂಗ್ ಆಫೀಸರ್ ಆಗಿ ಆಗಮಿಸಿದ ಫೈಝಲ್ ಕೃಷ್ಣಾಪುರ, ಮುಹಮ್ಮದ್ ಕಲ್ಲರ್ಬೆ ಅವರು ನೂತನ ಸಮಿತಿಯನ್ನು ಆಯ್ಕೆ ಗೊಳಿಸಿದರು.

KCF ಮದೀನಾ ಮುನವ್ವರ ಝೋನ್ ನೂತನ ಸಮಿತಿ ಅಧ್ಯಕ್ಷರಾಗಿ ಹಮೀದ್ ಮುಸ್ಲಿಯಾರ್ ಕರಾಯ,ಪ್ರ.ಕಾರ್ಯದರ್ಶಿಯಾಗಿ ಹುಸೈನಾರ್ ಉರುವಾಲ್ ಪದವು ಹಾಗೂ ಕೋಶಾಧಿಕಾರಿಯಾಗಿ -ಅಶ್ರಫ್ ಹಾಜಿ ಕಿನ್ಯ ಅವರನ್ನು ಆಯ್ಕೆ ಮಾಡಲಾಯಿತು. 5 ಇಲಾಖೆಗಳಿಗೆ ಅಧ್ಯಕ್ಷ ರು ಹಾಗೂ ಕಾರ್ಯದರ್ಶಿ ಸೇರಿ 23 ಕಾರ್ಯಕಾರಿ ಸದಸ್ಯರು ಹಾಗೂ ರಾಷ್ಟ್ರೀಯ ಕೌನ್ಸಿಲರ್ ಆಗಿ 8ಮಂದಿಯನ್ನು ಆಯ್ಕೆ ಮಾಡಲಾಯಿತು.

ಜಾಹೀರಾತು

ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಸ್ವಾಗತಿಸಿದರು. ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಉರುವಾಲ್ ಪದವು, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Exit mobile version