Site icon Ullalavani

ನಿಧನ: ದರ್ಗಾ ಮಾಜಿ ಉಪಾಧ್ಯಕ್ಷ ಖಾದರ್

UN NETWORKS

ಉಳ್ಳಾಲ : ಮಾಜಿ ಜಿಲ್ಲಾ ಪರಿಷತ್ ಸದಸ್ಯ, ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಆಡಳಿತ ಸಮಿತಿಯ ಮಾಜಿ ಉಪಾಧ್ಯಕ್ಷ ಎ.ಎ.ಖಾದರ್ ಸೋಮವಾರ ಬೆಳಗ್ಗೆ ನಿಧನರಾದರು.

ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ, ಕುಂಪಲ ನೂರಾನಿ ಯತೀಮ್ ಖಾನಾದ ಸದಸ್ಯರಾಗಿ, ಅಲೇಕಳ ಮದನಿ ಜೂನಿಯರ್ ಕಾಲೇಜ್‍ನ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನುಸ್ರತುಲ್ ಮಸಾಕೀನ್ ಅಧ್ಯಕ್ಶರಾಗಿದ್ದ ಸಂದರ್ಭ ಮೂರು ಜೋಡಿ ಬಡ ಹೆಣ್ಣುಮಕ್ಕಳ ಮದುವೆ ಮಾಡಿಸಿ ಸಾಮೂಹಿಕ ವಿವಾಹ, ರಂಝಾನ್‍ನಲ್ಲಿ ಬಡವರಿಗೆ ಒಂದು ತಿಂಗಳ ರೇಷನ್ ವ್ಯವಸ್ಥೆ ಆರಂಭಿಸಿದ್ದರು.

Exit mobile version