UN NETWORKS
ಉಳ್ಳಾಲ : ಸೌಜನ್ಯ ಸ್ಕೌಟ್ಸ್ ದಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ ವತಿಯಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳ್ಳಾಲ ಸ್ಥಳೀಯ ಸಂಸ್ಥೆಯ ರಾಜ್ಯ ಪುರಸ್ಕಾರ ಸ್ಕೌಟ್ಸ್ ಗೈಡ್ಸ್‍ಗಳಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು
ಉದ್ಘಾಟಸಿದರು .
ಪಾವೂರು-ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಡ್ವರ್ಡ್ ನಥಾನಿಯಲ್ ಐಮನ್ ರವರು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಎಳವೆಯಲ್ಲೇ ವ್ಯಕ್ತಿತ್ವ ವಿಕಸನದ ಗುಣಗಳಾದ ಧೈರ್ಯ, ತಾಳ್ಮೆ, ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ನಾಯಕತ್ವ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕೆಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸ್ಕೌಟ್ ಗೈಡ್ ಸಂಸ್ಥೆಯ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ ವಹಿಸಿ ಸ್ಕೌಟ್ಸ್ ಗೈಡ್ಸ್ ಚಳುವಳಿಯಲ್ಲಿ ಅತ್ಯುನ್ನತ ಪದಕವೆಂದರೆ ರಾಷ್ಟ್ರಪತಿ ಪದಕ. ಇದನ್ನು ಪಡೆಯಲು ವಿದ್ಯಾರ್ಥಿಗಳು ಬೇರೆ ಬೇರೆ ಸಾಹಸಮಯ ಚಟುವಟಿಕೆಗಳು, ಪ್ರಾವಿಣ್ಯತಾ ಪದಕಗಳು, ಸಮಾಜ ಸೇವಾ ಕಾರ್ಯಗಳು, ಸಮುದಾಯ ಅಭಿವೃದ್ಧಿ ಚಟುವಟಿಕೆಗಳು ಮುಂತಾದ ಪಠ್ಯೇತ್ತರ ಚಟುವಟಿಕೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬೇಕಾಗುತ್ತದೆ. ಹೀಗೆ ಮಕ್ಕಳ ಸಾಧನೆಯನ್ನು ಪರಿಗಣಿಸಿ ರಾಷ್ಟ್ರ ಸಂಸ್ಥೆಯು ಇಂತಹ ಅತ್ಯುನ್ನತ “ರಾಷ್ಟ್ರಪತಿ ಪುರಸ್ಕಾರ” ಪದಕವನ್ನು ನೀಡಿ ಗೌರವಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಅತ್ಯಧಿಕ ಮಕ್ಕಳು ಈ ಪ್ರಶಸ್ತಿಗೆ ಭಾಜನರಾಗುವುದು ಹೆಮ್ಮೆಯ ವಿಚಾರವೆಂದರು. ಕಾಸರಗೋಡು ಜಿಲ್ಲೆಯ ಸ್ಕೌಟ್ಸ್ ಗೈಡ್ ಸಂಸ್ಥೆಯ ಸಹಾಯಕ ಆಯುಕ್ತರಾದ ವಿನೋದ್ ಜೇವಾರು ಅವರು ತರಬೇತಿಯನ್ನು ನೀಡಿದರು.
ವಿಶ್ವಮಂಗಳ ಶಾಲೆಯ ಗೈಡ್ಸ್ ವಿದ್ಯಾರ್ಥಿನಿ ರಿಕ್ತಾ ಕಿರಣ್ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರತ್ನ ಶಾಲೆಯ ಸ್ಕೌಟ್ ಮಾಸ್ಟರ್ ಭಾಸ್ಕರ್ ರಾವ್ ನಿರೂಪಿಸಿದರು.