UN NETWORKS
ಉಳ್ಳಾಲ : ವಧೆ ನಡೆಸಲೆಂದು ಅಕ್ರಮವಾಗಿ ಕಟ್ಟಿಹಾಕಲಾಗಿದ್ದ 20 ಜಾನುವಾರು, 20 ಕೆ.ಜಿ ದನದ ಮಾಂಸ ಹಾಗೂ ರಿಕ್ಷಾ ವನ್ನು ಎಸಿಪಿ ನೇತೃತ್ವದ ವಿಶೇಷ ತಂಡ ಹಾಗೂ ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಉಳ್ಳಾಲದ ಕೋಡಿತೋಟ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಬಯಲು ಪ್ರದೇಶದಲ್ಲಿ 20 ದನ ಹಾಗೂ ಕರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಲಾಗಿತ್ತು. ಆಹಾರ, ನೀರು ಪೂರೈಸದೆ ಬಿಸಿಲಿನಲ್ಲಿ ನರಳಾಡುತ್ತಿರುವ ಜಾನುವಾರುಗಳ ಖಚಿತ ಮಾಹಿತಿ ಪಡೆದ ಎಸಿಪಿ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿತ್ತು. ಆರೋಪಿ ಇಬ್ರಾಹಿಂ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ವಧೆ ನಡೆಸಿದ ಜಾನುವಾರುಗಳ ಮಾಂಸ ಸಾಗಾಟಕ್ಕೆ ಉಪಯೋಗಿಸುತ್ತಿದ್ದ ರಿಕ್ಷಾ, 20 ಕೆ.ಜಿ ಮಾಂಸ ಮತ್ತು 20 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ಕೊಣಾಜೆಯ ಪಜೀರು ಗೋವನಿತಾಶ್ರಯಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಆರೋಪಿತನ ವಿರುದ್ಧ ಗೋಕಳವು ಸಹಿತ ಜಾನುವಾರು ಮಾಂಸ ಸಾಗಾಟ ಪ್ರಕರಣಗಳು ಉಳ್ಳಾಲ ಠಾಣೆಯಲ್ಲಿ ಇವೆ.
ಎಸಿಪಿ ರಾಮರಾವ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಠಾಣಾಧಿಕಾರಿ ಗೋಪಿಕೃಷ್ಣ ಸಹಿತ ಸಿಬ್ಬಂದಿ ಭಾಗವಹಿಸಿದ್ದರು.