Site icon Ullalavani

ಶ್ರೀ ಮಲರಾಯ ದೇವಸ್ಥಾನ ದೇವಸ್ಥಾನದಲ್ಲಿ ಕೋಳಿ ಕುಂಟ

UN NETWORKS

ಉಳ್ಳಾಲ : ಉಳ್ಳಾಲದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೇವಸ್ಥಾನ ಇಲ್ಲಿ ಎ.24ರಿಂದ ಎ.26ರ ವರೆಗೆ ನಡೆಯಲಿರುವ ವರ್ಷಾವಧಿ ಉತ್ಸವದ ಪೂರ್ವಭಾವಿಯಾಗಿ ಕೋಳಿ ಕುಂಟವು ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಳ್ಳಾಲಗುತ್ತು ಬಾಲಕೃಷ್ಣ ಶೆಟ್ಟಿ, ರಮಾನಾಥ ಭಂಡಾರಿ ಉಳ್ಳಾಲಗುತ್ತು, ಗಣೇಶ ಶೆಟ್ಟಿ ಬೊಡಂಗಿಲ ಮನೆ, ಸುರೇಂದ್ರ ಶೆಟ್ಟಿ ಮಂಚಿಲ, ಶಂಕರ ಹೊಗೆಮನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಳ್ಳಾಲ ಸುಂದರ, ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀನಿವಾಸ ಕೊರಸಾನ, ಯು.ಕೆ. ಗೋಪಾಲ, ಹರ್ಷವರ್ಧನ ಉಳ್ಳಾಲ, ದೇವಕಿ ಆರ್. ಉಳ್ಳಾಲ್, ಹರಿಣಾಕ್ಷಿ ಬಂಡಿಕೊಟ್ಯ, ಕಾರ್ಯಕಾರಿ ಸಮಿತಿ ಸದಸ್ಯ ಮಧ್ವರಾಜ್ ತೊಕ್ಕೊಟ್ಟು, ಲಕ್ಷ್ಮಣ ಬಂಡಸಾಲೆ, ಲತೀಶ್ ಬಂಡಿಕೊಟ್ಯ, ಉದಯ ಆರ್.ಕೆ. ಉಳ್ಳಾಲ್, ಜಗದೀಶ್ ಬಂಡಿಕೊಟ್ಯ ಉಪಸ್ಥಿತರಿದ್ದರು.

ಎ.24 ರಿಂದ ವರ್ಷಾವಧಿ ಉತ್ಸವ
ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ ಶ್ರೀ ಮಲರಾಯ ದೇವಸ್ಥಾನದ ವರ್ಷಾವಧಿ ಉತ್ಸವ ಎ.24 ರಿಂದ ಎ.26 ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದ ನಾಗದೇವರಿಗೆ ತಂಬಿಲದ ಮೂಲಕ ಆರಂಭವಾಗಲಿರುವ ಉತ್ಸವ ರಾತ್ರಿ 8ಕ್ಕೆ ಮಹಾಪೂಜೆ, 9 ಕ್ಕೆ ಧ್ವಜಾರೋಹಣ , ಕೊಟ್ಯದಾಯನ, ಕಂಚಿಲ್ ಸೇವೆ ನಡೆಯಲಿದೆ. ಎ.25 ರಂದು ರಾತ್ರಿ 8ಕ್ಕೆ ಮಹಾಪೂಜೆ ಬಳಿಕ ಪ್ರಥಮ ಬಂಡಿ ಉತ್ಸವ , ಎ.26 ಕ್ಕೆ ಬೆಳಿಗ್ಗೆ 11 ಕ್ಕೆ ಧೂಮಾವತಿ ಬಂಟ ದೈವಗಳ ಕಟ್ಟುಕಟ್ಟಲೆ ನೇಮ, ಮಧ್ಯಾಹ್ನ 1ಕ್ಕೆ ಅನ್ನದಾನ, ರಾತ್ರಿ 8ಕ್ಕೆ ಮಹಾಪೂಜೆ , ಪೂರ್ಣ ಬಂಡಿ ಉತ್ಸವ ಮತ್ತು ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಎ.24 ರಂದು ಯಕ್ಷಗಾನ ತಾಳಮದ್ದಲೆ, ಎ.25 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಳ್ಳಾಲ ಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Exit mobile version