Site icon Ullalavani

ಶ್ರೀ ಚೈತನ್ಯ ಪಿ.ಯು ಶೇ 96 ಫಲಿತಾಂಶ

UN NETWORKS

ಮಂಗಳೂರು : ಮಂಗಳೂರಿನ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96 ಫಲಿತಾಂಶವನ್ನು ಗಳಿಸಿದೆ.

ಪರೀಕ್ಷೆಗೆ ಹಾಜರಾದ 201 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 120 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಸಹಾಯಕ ವ್ಯವಸ್ಥಾಪಕ ಮುಖ್ಯಸ್ಥ ಮುರಳಿ ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವಿದ್ಯಾರ್ಥಿಗಳಾದ ಶ್ರುತಿ ಕಾಮತ್ ಶೇ 96.3 ಹಾಗೂ ಜಾಸ್ವಿನ್ ಡಿ. ಕೋಟ್ಯಾನ್ ಶೇ 95.1 ಅಂಕಗಳನ್ನು ಗಳಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರು.

ಜಾಹೀರಾತು

ಪ್ರಿನ್ಸಿಪಾಲ್ ರಾಮಕೃಷ್ಣ ಭೋಗ್ಯಾಮ್, ಉಪ ಪ್ರಿನ್ಸಿಪಾಲರಾದ ಸಿಂಧು ಮತ್ತಿತರರು ಉಪಸ್ಥಿತರಿದ್ದರು.

Exit mobile version