Site icon Ullalavani

ಜೂ.೧೨ರಂದು ದುಬೈಯಲ್ಲಿ ಯಕ್ಷಗಾನ ದುಂದುಭಿ ಮಣಿಕಂಠ ಮಹಿಮೆ , ರತಿ ಕಲ್ಯಾಣ ಕನ್ನಡ ಪೌರಾಣಿಕ ಯಕ್ಷಗಾನ

ವರದಿ: ರಜಿನಿ ಜಗದೀಶ್ ಪಡೀಲ್ ದುಬೈ
ದುಬೈ : ಯಕ್ಷಮಿತ್ರರು ದುಬೈ ಯುಎಇಯ ಇದರ ೧೨ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಣಿಕಂಠ ಮಹಿಮೆ , ರತಿ ಕಲ್ಯಾಣ ಕನ್ನಡ ಪೌರಾಣಿಕ ಯಕ್ಷಗಾನ ಜೂ. ೧೨ ರಂದು ಅಪರಾಹ್ನ ೫ ಗಂಟೆಗೆ ಇಂಡಿಯನ್ ಹೈಸ್ಕೂಲ್ ದುಬೈಯ ಶೇಖ್ ರಶೀದ್ ಆಡಿಟೋರಿಯಂ ಇಲ್ಲಿನ ಭವ್ಯ ರಂಗ ಮಂಟಪದಲ್ಲಿ ನಡೆಯಲಿದೆ.01
ಕರ್ನಾಟಕ ಕರಾವಳಿಯ ಗಂಡು ಕಲೆ ಯಕ್ಷಗಾನ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಕಳೆದ ಹಲವು ವರ್ಷಗಳಿಂದ ದುಬಾ ಯುಎಇಯಲ್ಲಿ ಯಕ್ಷಮಿತ್ರರು ಎನ್ನುವ ಸಾಂಸ್ಕೃತಿಕ ಸಂಘಟನೆಯ ಮೂಲಕ ಯಕ್ಷಗಾನ ಪ್ರಿಯರಿಗೆ ರಸದೌತಣ ನೀಡುತ್ತಿದ್ದು, ಈ ಬಾರಿಯ ಯಕ್ಷ ಗಾನದಲ್ಲಿ ಕರ್ನಾಟಕದ ಕರಾವಳಿಯಲ್ಲಿ ತನ್ನ ಗಾನ ಸಿರಿಯ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಭಾಗವತ ಗಾನಕೋಗಿಲೆ ಪಟ್ಲ ಸತೀಶ್ ಶೆಟ್ಟಿ ಹಿಮ್ಮೇಳದಲ್ಲಿ ಭಾಗವತಿಕೆ ನಡೆಸಿಕೊಡಲಿದ್ದು, ಚೆಂಡೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಮದ್ದಳೆಯಲ್ಲಿ ಪುತ್ತಿಗೆ ವೆಂಕಟೇಶ ಶಾಸ್ತ್ರಿ, ಲಕ್ಷ್ಮೀಶ ಶರ್ಮ ಮಧೂರು, ಅತಿಥಿ ಕಲಾವಿದರಾಗಿ ಅಕ್ಷಯ್ ಕುಮಾರ್, ಲಕ್ಷ್ಮಣ ಕುಮಾರ್ ಮರಕಡ ಭಾಗವಹಿಸಲಿದ್ದು, ಗಂಗಾಧರ ಡಿ. ಶೆಟ್ಟಿಗಾರ್ ವೇಷ ಭೂಷಣ ಮತ್ತು ವರ್ಣಾಲಂಕಾರ ನಿರ್ವಹಿಸಲಿದ್ದಾರೆ ಎಂದು ಯಕ್ಷಮಿತ್ರರು ಇದರ ಪ್ರಕಟನೆ ತಿಳಿಸಿದೆ.
ಕಲಾವಿದರಾಗಿ ಬಾಲಕೃಷ್ಣ.ಡಿ.ಶೆಟ್ಟಿಗಾರ್ ಕಿನ್ನಿಗೋಳಿ, ಸ್ವಾತಿ ಶರತ್ ಆಚಾರ್, ಸುಮಂತ್ ಹೆಗ್ಡೆ, ಪ್ರತೀಕ ಪಕ್ಕಳ, ಮನಸ್ವಿನಿ ಬಿ.ಯಸ್.ಶರ್ಮಾ, ಅದಿತಿ ದಿನೇಶ್ ಶೆಟ್ಟಿ, ಪ್ರಾಪ್ತಿ ಪಕ್ಕಳ, ಸ್ಮೃತಿ ಭಟ್, ಶೇಖರ್.ಡಿ.ಶೆಟ್ಟಿಗಾರ್, ಅನಿಕೇತ್.ಬಿ.ಯಸ್ .ಶರ್ಮಾ, ಶರಣ್ಯ ವೆಂಕಟೇಶ್ ಶಾಸ್ತ್ರಿ, ಕೃಷ್ಣರಾಜ ಭಟ್ ಅಬುದಾಬಿ, ವಾಸು ಬಾಯಾರ್, ವಸಂತ ಶೇರ್ವೆಗಾರ್, ಬಾಲಕೃಷ್ಣ ಶೆಟ್ಟಿ ಮಾಡೂರು, ಸೀತಾರಾಮ ರೈ, ಪ್ರಭಾಕರ ಸುವರ್ಣ, ಪ್ರಸಾದ್ ಅದ್ಯಪಾಡಿ, ಸಹನಾ ಭಟ್, ಗಿರೀಶ್ ನಾರಾಯಣ ಕಾಟಿಪಳ್ಳ, ಚಿದಾನಂದ ಪೂಜಾರಿ, ಆದಿತ್ಯ ದಿನೇಶ್ ಶೆಟ್ಟಿ, ಸುಧಾಕರ ತುಂಬೆ, ಕಿಶೋರ್ ಗಟ್ಟಿ ಉಚ್ಚಿಲ, ತನ್ವಿ ಭಟ್, ರವಿ ಭಟ್, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಹರೀಶ್.ಎಂ.ಎಸ್.ಯೆಯ್ಯಾಡಿ, ಕೃಷ್ಣ ಕುಮಾರ್ ಐಲ, ಸ್ವಪ್ನಾ ಕಿರಣ್, ವಿಕ್ರಂ ಶೆಟ್ಟಿ ಕಡಂದಲೆ, ಭವಾನಿ ಶಂಕರ ಶರ್ಮಾ, ಕರುಣಾಕರ ಪುಜಾರಿ, ದಿನೇಶ್, ಚಂದ್ರಮೋಹನ್, ಭಾಸ್ಕರ್ ಭಾಗವಹಿಸಲಿದ್ದಾರೆ ಎಂದು ಯಕ್ಷಮಿತ್ರರು ದುಬೈ ಇದರ ರೂವಾರಿಗಳಾದ ವಿಠಲ ಶೆಟ್ಟಿ, ದಿನೇಶ್ ಶೆಟ್ಟಿ ಕುಟ್ಟಿಂಜೆ, ಚಿದಾನಂದ ಪೂಜಾರಿ ವಾಮಂಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version