Site icon Ullalavani

ಕುಂಪಲ : ವಿನೂತನ ರೀತಿಯ ರೋಡ್‌ ಶೋ

UN NETWORKS

ಕುಂಪಲ: ಕುಂಪಲ ಬೈಪಾಸ್‌ನಿಂದ ಕುಂಪಲ ಆಶ್ರಯ ಕಾಲನಿವರೆಗೆ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಪರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ನೇತೃತ್ವದಲ್ಲಿ ವಿನೂತನ ರೀತಿಯಲ್ಲಿ ರೋಡ್‌ ಶೋ ಮೂಲಕ ಮತಯಾಚನೆ ನಡೆಸಲಾಯಿತು.

ರೋಡ್‌ ಶೋನಲ್ಲಿ ಹುಲಿ ವೇಷ, ಕಂಬಳದ ಎತ್ತುಗಳ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿ ಮಿಥುನ್‌ ರೈ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಸುರೇಶ್‌ ಭಟ್ನಗರ, ದಿನೇಶ್‌ ಕುಂಪಲ, ಗ್ರಾಮಾಧ್ಯಕ್ಷ ಕಿಶೋರ್‌ ಮುಂಡೋಳಿ, ವಿನೋದ್‌ ಕುಂಪಲ, ದೀಪಕ್‌ ಪಿಲಾರ್‌, ದಿನೇಶ್‌ ಬೇಕಲ್‌, ಬಾಝಿಲ್‌ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು

Exit mobile version