Site icon Ullalavani

ಸರ್ವ ದೇವರನ್ನು ಒಲಿಸುವ ಏಕೈಕ ದಾರಿ ಭಜನೆ: ಡಾ. ಆಶಾ ಜ್ಯೋತಿ ರೈ

UN NETWORKS

ಪಿಲಾರು : ಶಿವನಿಗೆ ಅಭಿಷೇಕದ ಮೂಲಕ ಸೇವೆ ಸಲ್ಲಿಸಿದರೆ, ದೇವಿಗೆ ಅರ್ಚನೆಯ ಮುಖಾಂತರ ಒಲಿಸಲು ಪ್ರಯತ್ನಿಸುತ್ತೇವೆ. ಸರ್ವ ದೇವರನ್ನು ಒಂದೇ ವಿಧದಲ್ಲಿ ಒಲಿಸಲು ಭಜನೆಯಿಂದ ಸಾಧ್ಯ ಎಂದು ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಹೇಳಿದರು.

ಪಿಲಾರು ಶ್ರೀ ಮಹಾಲಕ್ಷ್ಮೀ ಮಂದಿರ ದ ಪ್ರತಿಷ್ಠಾ ದಶಮಾನೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದ್ವೇಷ ಮರೆತು ಎಲ್ಲರು ಒಂದಾಗಿ ಭಗವಂತನ ಭಜಿಸಬೇಕು. ಆ ಮೂಲಕ ಸಂಘಟನಾ ಸಾಮಾರ್ಥ್ಯ ಹೆಚ್ಚಿಸಬೇಕು. ಸಂಘಟನೆಯ ಮುಖಾಂತರ ಸಮಾಜಮುಖಿ ಕಾರ್ಯಗಳನ್ನ ನಡೆಸುವಂತಾಗಬೇಕು ಎಂದರು. ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ಮಾತನಾಡಿ ಯುವ ಶಕ್ತಿಗಳಿಂದು ಹಾದಿ ತಪ್ಫುತ್ತಿದ್ದು,ಮಂದಿರಗಳು ,ಸಂಘ ಸಂಸ್ಥೆಗಳು ಒಟ್ಟಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ನಡೆಸಬೇಕು ಎಂದು ನುಡಿದರು.
ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ನಿವೃತ್ತ ಕಾರ್ಗಿಲ್ ಯೋಧ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ, ಜೀವರಕ್ಷಕ ಅಶೋಕ್ ಸೋಮೇಶ್ವರ ಹಾಗೂ ಕೃಷಿಕ ಶಾಂತಾರಾಮ ಸರಳಾಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾಪಿಕಾಡು ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಧಾರ್ಮಿಕ ಸಭೆ ಉದ್ಘಾಟಿಸಿದರು. ಪಜೀರು ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ್ ಆಳ್ವ ಕುವೆತ್ತಬೈಲು ಅಧ್ಯಕ್ಷತೆ ವಹಿಸಿದ್ದರು. ಬೊಳ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು, ಕಿನ್ಯ ಬೆಳರಿಂಗೆ ಭಂಡಾರಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರುಗುತ್ತು, ಬ್ರಹ್ಮಕುಮಾರಿ ಪಾರ್ವತಿ, ಮಾಜಿ ಕಬಡ್ಡಿಪಟು ಸುನಿಲ್ ರೈ ಕುರ್ನಾಡು, ಸಮಾಜ ಸೇವಕ ಸಂತೋಷ್ ಕುಮಾರ್ ಕುಂಪಲ, ಮಹಾಲಕ್ಷ್ಮಿ ಮಂದಿರದ ಗೌರವಾಧ್ಯಕ್ಷ ದಿವಾಕರ ಬಗಂಬಿಲ, ಅಧ್ಯಕ್ಷ ರಮೇಶ್ ಗಟ್ಟಿ ಹಾಗೂ ಮಹಿಳಾ ಮಂಡಲದ ಅಧ್ಯಕ್ಷೆ ಶೋಭಾ ಗಟ್ಟಿ ಉಪಸ್ಥಿತರಿದ್ದರು.

ಜಾಹೀರಾತು

ಪತ್ರಕರ್ತ ದಿನೇಶ್ ನಾಯಕ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Exit mobile version