ಉಳ್ಳಾಲ್ ನ್ಯೂಸ್ ಡೆಸ್ಕ್
ತೊಕ್ಕೊಟ್ಟು: ಆರೋಗ್ಯ ಸಂಬಂಧಿ ಸಕಲ ಸವಲತ್ತುಗಳನ್ನು ಹೊಂದಿರುವ ವಿಸ್ತರಿತ ಸ್ಪೂರ್ತಿ ಕ್ಲಿನಿಕ್ ಕಟ್ಟಡ ಜೂ. 10ರಂದು ತೊಕ್ಕೊಟ್ಟು ಭಟ್ನಗರದಲ್ಲಿ ಕಾರ್ಯಾರಂಭಿಸಲಿದೆ.
10 ವರುಷಗಳ ಹಿಂದೆ ತೊಕ್ಕೊಟ್ಟಿನಲ್ಲಿ ನಾಲ್ಕು ವೈದ್ಯರಿಂದ ಆರಂಭಗೊಂಡಿದ್ದ ಸ್ಪೂರ್ತಿ ಕ್ಲಿನಿಕ್ ಇದೀಗ ಭಟ್ನಗರದಲ್ಲಿ 10 ಸಾವಿರ ಚದರ ಅಡಿಯ ವಿಸ್ತರಿತ ಕಟ್ಟಡಕ್ಕೆ ವರ್ಗಾವಣೆಗೊಂಡಿದೆ. ಇಲ್ಲಿ 25 ವೈದ್ಯರು ಸೇವೆ ನೀಡಲಿದ್ದು ಅತ್ಯುತ್ತಮ ನಿರ್ವಹಣಾ ಸಾಫ್ಟ್‌ವೇರ್, ಡೆಂಟಲ್ ಕೇರ್ ಯೂನಿಟ್, ಡಿಜಿಟಲ್ ಎಕ್ಸ್‌ರೇ 300 ಎಂಎ ಜಿಇ ಉಪಕರಣ, ಅತೀ ಹೆಚ್ಚಿನ ಫ್ರಿಕ್ವೆನ್ಸಿ ಫ್ರೋಬ್‌ನೊಂದಿಗೆ ಫಿಲಿಪ್ಸ್ ಎಚ್‌ಡಿ ಅಲ್ಟಾ ಸೌಂಡ್, ಇಸಿಜಿ ಹಾಗೂ ಕಾರ್ಡಿಯಾಕ್ ಇಖೊ ಸ್ಕಾ ನ್, ಫಾರ್ಮಸಿ, ಅತೀ ಸುಸಜ್ಜಿತ ಲ್ಯಾಬ್, ಬಾಲ ಶುಶ್ರೂಷ ಕೊಠಡಿ ಮತ್ತು ಉಪಹಾರ ಗೃಹ ಹೊಂದಿದೆ ಎಂದು ಮೂಳೆ ಮತ್ತು ಎಲುಬು ತಜ್ಞ ಡಾ. ವಿಕ್ರಮ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ದಂತ ತಜ್ಞೆ ಡಾ.ಅಮಿತಾ ಹೆಗ್ಡೆ, ಫಿಸಿಶಿಯನ್ ಡಾ. ಸುರೇಶ್ ಜಿ, ಚರ್ಮರೋಗ ತಜ್ಞ ಡಾ. ಗಿರೀಶ್ ಬಿ.ಎಸ್, ಡಾ. ಕಿಶನ್ ಆಳ್ವ, ಡಾ.ಅಭಿಜಿತ್ ಎಸ್.ಶೆಟ್ಟಿ ಹಾಗೂ ಇಎನ್‌ಟಿ ತಜ್ಞ ಡಾ.ಶ್ರೀನಾಥ್ ಕಾಮತ್ ಉಪಸ್ಥಿತರಿದ್ದರು.