Site icon Ullalavani

ದೇರಳಕಟ್ಟೆ: ಹೋಮಿಯೋಪತಿ ದಿನಾಚರಣೆ

UN NETWORKS

ದೇರಳಕಟ್ಟೆ : ನೈತಿಕ ಸ್ಥೈರ್ಯ ಸಮರ್ಥ ಜೀವನಕ್ಕೆ ಸಹಕಾರಿ. ಭಯವನ್ನು ಎಂದಿಗೂ ತೋರಿಸದೆ ಶಾರೀರಿಕವಾಗಿ ಧೈರ್ಯವಿದ್ದಲ್ಲಿ ಯಶಸ್ವಿ ಜೀವನ ರೂಪಿಸಲು ಸಾಧ್ಯ ಎಂದು ಬೆಳಗಾವಿ ಕೆಎಲ್‍ಇ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಮುಕುಂದ್ ಎ. ಉಡ್ಜಂಕರ್ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಹೋಮಿಯೋಪಥಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸೂಕ್ಷ್ಮಾಣು ಜೀವಿಗಳ ರೂಪದಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳಿಗೆ ಸ್ಯಾಮ್ಯುಯೆಲ್ ಹಾನಿಮನ್ ಔಷಧಿಯನ್ನು ಕಂಡು ಹಿಡಿದು ಹೋಮಿಯೋಪತಿ ಆರಂಭವಾಗಿತ್ತು. ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಮಹತ್ತರ ಬೆಳವಣಿಗೆಗೆ ಹಾನಿಮನ್ ನಂತಹ ಶ್ರೇಷ್ಟ ವ್ಯಕ್ತಿಗಳು ಮತ್ತೆ ಹೆಚ್ಚು 10 ವರ್ಷಗಳ ಕಾಲ ಬಾಳಬೇಕಿತ್ತು. ಪ್ರಾಮಾಣಿಕತೆ, ಸಮಗ್ರತೆ ಜೀವನದ ಪ್ರಮುಖ ಅಂಶಗಳಾಗಿವೆ. ಅದನ್ನು ವಿದ್ಯಾರ್ಥಿಗಳಿಗೆ ಅರಿಯುವಂತೆ ಪದವಿಯನ್ನು ನೀಡುತ್ತಿರುವ ಫಾದರ್ ಮುಲ್ಲರ್ಸ್ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ರೆ. ಫಾ. ರಿಚ್ಚಾರ್ಡ್ ಕುವೆಲ್ಲೊ ವಹಿಸಿ ಹೋಮಿಯೋಪತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ವೈದ್ಯರಾದವರು ಕೇವಲ ಕ್ಲಿನಿಕ್ ಗಳಲ್ಲಿ ಇರದೆ ಜನರೊಂದಿಗೆ ಬೆರೆತು ಔಷಧ ಪದ್ಧತಿಯ ಕುರಿತು ತಿಳಿಯಪಡಿಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಜೆ. ಕರ್ತಾರ್ ಸಿಂಗ್, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ರೆ. ಫಾ. ವಿನ್ಸೆಂಟ್ ವಿನೋದ್ ಸಲ್ದಾನ ಉಪಸ್ಥಿತರಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿ ಬಿಜಿತ ಮಂಡೈ ಅವರನ್ನು ಗೌರವಿಸಲಾಯಿತು. ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ಸ್ವಾಗತಿಸಿದರು. ವಫಾ ಝೈನಾಬ್ ಮತ್ತು ಅಬಿ ಜಾನ್ಸನ್ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಡಾ. ರಂಜನ್ ಬ್ರಿಟ್ಟೊ ವಂದಿಸಿದರು.

Exit mobile version