Site icon Ullalavani

ಕೊಣಾಜೆ: ಬೈಕ್ -ಪಿಕಪ್ ಡಿಕ್ಕಿ, ಹೊತ್ತಿ ಉರಿದ ಬೈಕ್, ಬೈಕ್ ಸವಾರರಿಗೆ ಗಂಭೀರ ಗಾಯ

UN NETWORKS

ಕೊಣಾಜೆ : ಕೊಣಾಜೆ ಠಾಣಾ ವ್ಯಾಪ್ತಿಯ ಗಣೇಶ್ ಮಹಲ್ ಬಳಿ ಬೈಕೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹೊತ್ತಿ ಉರಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.ಘಟನೆಯಲ್ಲಿ ಬೈಕ್ ಸವಾರ ಹಾಗೂ ಸಹ ಸವಾರನಿಗೆ ಗಂಭೀರ ಗಾಯವಾಗಿದೆ.

ಮಂಗಳೂರು ವಿಶ್ವವಿದ್ಯಾಲಯ ಬಳಿಯ ಗಣೇಶ್ ಮಹಲ್ ಸಮೀಪ ಪಿಕಪ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆ ಸಂಭವಿಸಿದಾಗ ಬೈಕ್ಮನ ಸವಾರರು ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ..ಅವರನ್ನು ದೇರಳಕಟ್ಟಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಕೂಡಲೇ ಬೈಕ್ ಗೆ ಬೆಂಕಿ ಹಿಡಿದಿದ್ದು ಬೈಕ್ ಸಂಪೂರ್ಣ ಸುಟ್ಟು ಹೋಗಿದೆ.

ಜಾಹೀರಾತು

ಗಾಯಗೊಂಡ ಬೈಕ್ ಸವಾರರನ್ನು ಬಾಕ್ರಬೈಲ್ ಮುದುಂಗಾರು ಕಟ್ಟೆ ಮೂಲದವರು ಎನ್ನಲಾಗಿದೆ.

Exit mobile version