Site icon Ullalavani

ಪಾನೀರ್ ನಲ್ಲಿ ಗರಿಗಳ ಆದಿತ್ಯವಾರ, ದಿವ್ಯ ಬಲಿಪೂಜೆ

UN NETWORKS

ಪಾನೀರ್ : ಗರಿಗಳ ಆದಿತ್ಯವಾರ ಪ್ರಯುಕ್ತ ದೇರಳಕಟ್ಟೆ ಪಾನೀರು ದಯಾ ಮಾತೆ ಇಗರ್ಜಿಯಲ್ಲಿ ಭಾನುವಾರ ಬೆಳಗ್ಗೆ ಗರಿಗಳ ಆಶೀರ್ವಚನ ಕಾರ್ಯಕ್ರಮ , ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆ ನೆರವೇರಿತು.

ದಿವ್ಯ ಬಲಿ ಪೂಜೆಯನ್ನು ವಂ . ಡಾ. ಫಾದರ್ ರೋಬರ್ಟ್ ಕ್ರಾಸ್ತ ನೆರವೇರಿಸಿದರು. ಪಾನೀರ್ ಚರ್ಚಿನ ಧರ್ಮಗುರು ವಂ. ಫಾ. ಡೆನ್ನಿಸ್ ಸುವಾರಿಸ್ ಮತ್ತು ಲ್ಯಾರಿ ಪಿಂಟೋ ಉಪಸ್ಥಿತರಿದ್ದರು. ಪಾನೀರ್ ಚರ್ಚಿನ ಧರ್ಮ ಭಗಿನಿಯರು ಕ್ರೈಸ್ತ ಬಾಂಧವರು ಚರ್ಚಿನ ಎಲ್ಲ ವಾಳೇಯ ಗುರಿಕಾರರು ಸಂಘ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.

Exit mobile version