UN NETWORKS
ಉಳ್ಳಾಲ : ಮೋದಿ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ಕಾರು ಮತ್ತು ಬಸ್ಸಿಗೆ ಕಲ್ಲು ತೂರಾಟ ನಡೆದು ನಾಲ್ವರು ಗಾಯಗೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಮದನಿನಗರ ಸಮೀಪ ಶನಿವಾರ ಸಂಜೆ ವೇಳೆ ನಡೆದಿದೆ. ಕೃತ್ಯ ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕೊಣಾಜೆ ಠಾಣೆಯೆದುರು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆಯೂ ನಡೆದಿದೆ.
ಕುಂಪಲ ನಿವಾಸಿಗಳಾದ ಸುಜನ್ (24) ಮತ್ತು ನಾಹುಷ್ (21) , ಮದನಿ ನಗರ ನಿವಾಸಿ ಮಹಮ್ಮದ್ ಅಜ್ಮಲ್ ಹಾಗೂ ಉಳ್ಳಾಲದ ಸಂಶೀರ್(30) ಗಾಯಗೊಂಡವರು. ಮದನಿನಗರ ಸಮೀಪ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತಕ್ಕೆ ಪ್ರತಿಯಾಗಿ ಕೇರಳ ನೋಂದಾಯಿತ ಕಾರಿನಲ್ಲಿ ಬಂದ ನಾಲ್ವರ ತಂಡ, ಅಪಘಾತವಾಗಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ಮೋದಿ ರ್ಯಾಲಿಯಿಂದ ವಾಪಸ್ಸಾಗುತ್ತಿದ್ದ ಬಸ್ ನಲ್ಲಿದ್ದ ಯುವಕರು ಗಲಾಟೆಯನ್ನು ಪ್ರಶ್ನಿಸಿದ್ದರು. ಈ ವೇಳೆ ಇತ್ತಂಡಗಳ ನಡುವೆ ಹೊಡೆದಾಟ ಸಂಭವಿಸಿ, ತಂಡವೊಂದು ಬಸ್ಸಿನೊಳಗಡೆ ಇದ್ದ ಮಹಿಳೆಯರ ಮೇಲೂ ಕೈ ಮಾಡಿದೆ. ಬಳಿಕ ಬಸ್ಸು, ಕಾರಿಗೆ ಕಲ್ಲು ತೂರಾಟ ನಡೆದು ಗಾಜು ಹಾನಿಗೈದಿದ್ದಾರೆ. ಘಟನೆಯಿಂದ ನಾಲ್ವರು ಗಾಯಗೊಂಡು ದೇರಳಕಟ್ಟೆ ಕೆ.ಎಸ್ ಹೆಗಡೆ ಮತ್ತು ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಣಾಜೆ ಠಾಣೆಗೆ ಮುತ್ತಿಗೆ: ಕೃತ್ಯ ಖಂಡಿಸಿ ಸುಮಾರು 400 ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಇಬ್ಬರು ಶಾಸಕರು ಸೇರಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿದರು. ಆರೋಪಿಗಳನ್ನೂ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಶಾಸಕ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ , ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ್‍ವೆಲ್ ಹಾಗೂ ಸ್ಥಳೀಯ ಮುಖಂಡರಾದ ಸಂತೋಷ್ ರೈ ಬೋಳಿಯಾರ್ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಳಿಕ ಪೆÇಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಒಪ್ಪುವುದಿಲ್ಲ. ವಾಪಸ್ ಬರುವಾಗ ನಡೆದಿರುವ ಘಟನೆ ವಿಷಾಧಕರ. ಕುತ್ತಾರು ಪ್ರದೇಶದಲ್ಲಿ ಸಿಸಿಟಿವಿ ದಾಖಲೆಗಳನ್ನು ಪಡೆಯಲು ಸೂಚಿಸಲಾಗಿದೆ. ದಾಳಿಗೊಳಗಾದ ಮಹಿಳೆಯರ ಮಾಹಿತಿ ಪಡೆದುಕೊಳ್ಳಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆ ನಡೆಸಿ ಪರಾರಿಯಾಗಿದ್ದಾರೆ. ಅವರನ್ನು ಬೆನ್ನತ್ತುವ ಕೆಲಸ ಮಾಡಲಾಗಿದೆ. 3 ಇನ್ಸ್ ಪೆಕ್ಟರ್ 20 ಸ್ಟಾಫ್ ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕಠಿಣ ಸೆಕ್ಷನ್ ನಡಿ ಪ್ರಕರಣ ದಾಖಲಿಸುತ್ತೇವೆ. ಬೇಗ ಬೇಲ್ ಆಗದಂತೆ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸುತ್ತೇವೆ. ತಡರಾತ್ರಿಯೇ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತೇವೆ.
ಸಂದೀಪ್ ಪಾಟೀಲ್
ಪೊಲೀಸ್ ಕಮೀಷನರ್