Site icon Ullalavani

ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

UN NETWORKS

ಉಳ್ಳಾಲ : ಸೋಮೇಶ್ವರ ಗ್ರಾಮದ ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳು ಕುಡಿಯುವ ನೀರು, ಕಡಲ್ಕೊರೆತ ತಡೆಗೋಡೆ ಸಮಸ್ಯೆಯನ್ನು ಎದುರಿಟ್ಟು ಚುನಾವಣಾ ಬಹಿಷ್ಕಾರ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಸ್ಥಳೀಯ ನಿವಾಸಿ ಸಂಶುದ್ದೀನ್ ಉಚ್ಚಿಲ ಮಾತನಾಡಿ ಸೋಮೇಶ್ವರ ಗ್ರಾಮದ ಕಾಟುಂಗರಗುಡ್ಡೆಯಲ್ಲಿ ಸುಮಾರು 30 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಕಡಲ್ಕೊರೆತ ಹೆಚ್ಚಿರುವ ಪ್ರದೇಶದಲ್ಲಿ ಶಾಶ್ವತ ತಡೆಗೋಡೆಯೂ ಮರೀಚಿಕೆಯಾಗಿದೆ. ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ, ಸೋಮೇಶ್ವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಆಶ್ವಾಸನೆ ಮಾತ್ರ ಈವರೆಗೆ ದೊರೆತಿದೆ. ಈವರೆಗೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ನೀರಿಗಾಗಿ ಅಧಿಕಾರಿಗಳ ಟೇಬಲ್ ಬಳಿ ಹೋದಾಗ ಎರಡು ದಿನಗಳವರೆಗೆ ಟ್ಯಾಂಕರ್ ಮುಖೇನ ನೀರು ಸರಬರಾಜು ಆಗುತ್ತದೆ. ಆ ಬಳಿಕ ಪತ್ತೆಯೇ ಇರುವುದಿಲ್ಲ. ಜಿಲ್ಲಾಧಿಕಾರಿಗಳು ಆದೇಶ ಮಾಡಿರುವ ನೀರು ಎಲ್ಲಿಗೆ ಹೋಗುತ್ತಿದೆ ಅನ್ನುವ ಪ್ರಶ್ನೆ ಸ್ಥಳೀಯರಲ್ಲಿ ಮೂಡುತ್ತಿದೆ. ಇದೀಗ ಮತಯಾಚನೆಗೆ ಬರುವವರು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಲೋಕಸಭಾ ಚುನಾವಣೆಯನ್ನು ಉಚ್ಚಿಲ ಕಾಟುಂಗರಗುಡ್ಡೆ ನಿವಾಸಿಗಳು ಖಂಡಿತವಾಗಿ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.

ಸ್ಥಳೀಯ ನಿವಾಸಿ ಮಿಸ್ರಿಯಾ ಎಂಬವರು ಮಾತನಾಡಿ ಚಿಕ್ಕ ಮಕ್ಕಳಿನಿಂದ ಉಚ್ಚಿಲ ಕಾಟುಂಗರಗುಡ್ಡೆಯಲ್ಲಿ ನೆಲೆಸಿದ್ದೇವೆ. ಇದೀಗ 30 ವರ್ಷಗಳಾಗಿವೆ ಇನ್ನೂ ಕೂಡ ನೀರಿನ ಸಮಸ್ಯೆ ಬಗೆಹರಿದಿಲ್ಲ. ನೀರಿಗಾಗಿ ಪರದಾಡುತ್ತಾ ಬಂದಿದ್ದೇವೆ. ಈ ಕಾರಣಕ್ಕಾಗಿ ು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ. ಮಳೆಗಾಲದಲ್ಲಿ ಎರಡು ತಿಂಗಳು ಮಾತ್ರ ನೀರು ಸರಿಯಾಗಿ ಉಪಯೋಗಿಸುತ್ತೇವೆ. ಬಳಿಕ ಸರಬರಾಜಾಗುವ ನೀರಿನಲ್ಲಿ ಹುಳಗಳ ಸಮಸ್ಯೆ , ತಲೆಗೂದಲು ಉದುರುವುದು, ಮೈಯಲ್ಲಿ ಕಜ್ಜಿ ಆಗುವಂತಹ ಸ್ಥಿತಿ ಇದೆ. ಇದರಿಂದ ಮಕ್ಕಳು, ಮಹಿಳೆಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ಬೇಸರ ತಂದಿದೆ ಎಂದರು.
ಸ್ಥಳಿಯರಾದ ದೇವಕಿ, ತಾಹಿರಾ, ಅಬ್ದುಲ್ ಖಾದರ್, ಟಿ.ಕೆ ಮಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.

Exit mobile version