Site icon Ullalavani

ಬಾಳೆಪುಣಿ :ಗಾಳಿಗೆ ಹಾರಿಹೋದ ಶಾಲಾ ಹಂಚು

UN NETWORKS

ಬಾಳೆಪುಣಿ : ಉಳ್ಳಾಲ ಭಾಗದಲ್ಲಿ  ಗುರುವಾರ ಸಂಜೆ ಗುಡುಗು, ಗಾಳಿ ಸಹಿತ ಮಳೆಯಾಯಿತು.  ಸುಡುಬಿಸಿಲಿನಿಂದ  ಕೂಡಿದ್ದ ವಾತಾವರಣ  15 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ತಂಪಾಯಿತು.

ಮುಡಿಪು ಸಮೀಪದ ಬಾಳೆಪುಣಿ ಸರಕಾರಿ ಶಾಲೆಯ ಹೆಂಚುಗಾಳು ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ. ಬಾಳೆಪುಣಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ  ಸರಕಾರಿ ಉನ್ನತೀಕರಿಸಿದ  ಪ್ರಾಥಮಿಕ ಶಾಲೆಯ ಸುಮಾರು 100 ಕ್ಕೂ ಅಧಿಕ ಹಂಚುಗಳು ಹಾರಿಹೋಗಿ ನಷ್ಟ ಸಂಭವಿಸಿದೆ. ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮಕ್ಕಳು ಹಾಗೂ ಸಿಬ್ಬಂದಿ ಯಾರೂ ಇರಲಿಲ್ಲ. ಇದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿದೆ.  ಘಟನೆ ಕುರಿತು ಶಾಲಾ ಸಮಿತಿ ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿದೆ.

ತೊಕ್ಕೊಟ್ಟು, ತಲಪಾಡಿ, ಕೋಟೆಕಾರು, ಬೀರಿ, ಉಳ್ಳಾಲ, ಕುತ್ತಾರು, ದೇರಳಕಟ್ಟೆ ಭಾಗದಲ್ಲಿ ಸಂಜೆ ಮಳೆಯಾಯಿತು. ಸಿಡಿಲು ಮತ್ತು ಗಾಳಿಯಿಂದ ಆರಂಭಗೊಂಡ ಮಳೆ 15 ನಿಮಿಷಗಳ ಕಾಲ ಸುರಿಯಿತು. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ,  ದೇರಳಕಟ್ಟೆಯಿಂದ ಕುತ್ತಾರು ರಸ್ತೆ ಅಗಲೀಕರಣ ಕಾಮಗಾರಿ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ಸ್ವಲ್ಪಕಾಲ ಅಡಚಣೆಯಾಯಿತು.  ಸುಡುಬಿಸಿಲಿನಿಂದ ಒಣಗಿದ್ದ ಭೂಮಿಗೆ  ಮಳೆ ಬಿದ್ದಿದರಿಂದಾಗಿ ಗಿಡಮರಗಳು  ತಂಪಾದವು. 

Exit mobile version