Site icon Ullalavani

ಮೋದಿ ಕಾರ್ಯಕ್ರಮಕ್ಕೆ ಅರಶಿನ ಕುಂಕುಮ ಮೆಹಂದಿ ಇಟ್ಟು ಆಮಂತ್ರಣ

UN NETWORKS

ಕೋಟೆಕಾರ್ : ಎಪ್ರಿಲ್ 13 ಕರಾವಳಿಯ ಜನರಿಗೆ ಹಬ್ಬದ ಸಂಭ್ರಮ. ಜಗತ್ತೇ ಮೆಚ್ಚಿದ ಭಾರತಾಂಬೆಯ ಹೆಮ್ಮೆಯ ಪುತ್ರ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜಿಲ್ಲೆಗೆ ಆಗಮಿಸಲಿದ್ದಾರೆ. ಸಂಜೆ 3.30 ಕ್ಕೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿ.ಪಂ.ಸದಸ್ಯೆ ಧನಲಕ್ಷೀ ಗಟ್ಟಿ ಹೇಳಿದರು.

ಅವರ ನೇತೃತ್ವದಲ್ಲಿ ಕೋಟೆಕಾರ್ ಪಟ್ಟಣ ಪಂ.ಉಪಾಧ್ಯಕ್ಷೆ ಭಾರತಿ ಗಟ್ಟಿ ಮತ್ತಿತರರು ಮನೆ ಮನೆಗೆ ತೆರಳಿ ವಿಶೇಷವಾಗಿ ಮಹಿಳೆಯರಿಗೆ ಅರಶಿನ ಕುಂಕುಮ ಮತ್ತು ಹಸ್ತಕ್ಕೆ ಕಮಲದ ಚಿತ್ರವನ್ನು ಮೆಹಂದಿ ಮೂಲಕ ಬಿಡಿಸಿ ಕಾರ್ಯಕ್ರಮ ದ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿತು.

Exit mobile version