Site icon Ullalavani

ಮಿಥುನ್ ರೈ ಮತಯಾಚನೆ

ಉಳ್ಳಾಲ: ಜಿಲ್ಲಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಶನಿವಾರ ಮಂಗಳೂರು ಕ್ಷೇತ್ರದ ವಿವಿಧೆಡೆ ಧಾರ್ಮಿಕ ಸ್ಥಳ ಹಾಗೂ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.

ಸಚಿವ ಯು.ಟಿ ಖಾದರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಳಿತು ಪ್ರಚಾರ ಕಾರ್ಯದಲ್ಲಿ ತೊಡಗಿದರು. ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸೈಯ್ಯಿದ್ ಇಸ್ಮಾಯಿಲ್ ವಲೀಯುಲ್ಲಾಹಿ ದರ್ಗಾ ಮಂಜನಾಡಿ ಸಹಿತ ಬೋಳಿಯಾರು, ಕೊಣಾಜೆ, ಅಂಬ್ಲಮೊಗರು, ಹರೇಕಳ, ಕಿನ್ಯಾ, ಕೆ.ಸಿ.ರೋಡು, ಉಳ್ಳಾಲ ಭಾಗದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

Exit mobile version