Site icon Ullalavani

ತೊಕ್ಕೊಟ್ಟು: ಕಾರ್ಮಿಕರ ಜತೆಗೆ ಕೋಟಾ ಪೂಜಾರಿ ಸಂವಾದ

ತೊಕ್ಕೊಟ್ಟು: ಪತ್ನಿ, ಮಕ್ಕಳ, ಕುಟುಂಬಿಕರ ಏಳಿಗೆಯನ್ನು ಬಯಸದೆ ಕೇವಲ ದೇಶದ ಹಿತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿರಿಸಿಕೊಂಡ ಪ್ರಧಾನಿ ಮೋದಿಯವರನ್ನು ಜನತೆ ಬೆಂಬಲಿಸಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತೊಕ್ಕೊಟ್ಟು ಒಳಪೇಟೆಯ ಶ್ರೀ ಮೂಕಾಂಬಿಕಾ ಕ್ಲೋತ್ ಸ್ಟೋರ್ಸ್ ನಲ್ಲಿ ಶನಿವಾರ ಕಾರ್ಮಿಕರ ಜತೆಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಕುಟುಂಬದ ಏಳಿಗೆಗಾಗಿ ಶ್ರಮಿಸುವುದೇ ರಾಜಕಾರಣ ಎಂದು ರಾಜಕಾರಣಿಗಳು ಬಾಳುತ್ತಿದ್ದಾರೆ. ಆದರೆ ದೇಶದ ಏಳಿಗೆಯನ್ನು ಮನದಲ್ಲಿಟ್ಟುಕೊಂಡು ಶ್ರಮಿಸಲು ರಾಜಕೀಯ ಎಂಬುವುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ. ಸ್ವ ಉದ್ಯೋಗದಿಂದ ಹಿಡಿದು ಪ್ರತಿಯೋರ್ವ ಭಾರತೀಯ ಪ್ರಜೆ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣವನ್ನು ಕಲ್ಪಿಸುತ್ತಾ ಸಾಗುತ್ತಿರುವ ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕಿದೆ ಎಂದರು.

ಈ ಸಂದರ್ಭ ಕಂಪೆನಿ ಮಾಲೀಕ ಚಂದ್ರಹಾಸ್ ಪಂಡಿತ್ ಹೌಸ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ಹರಿಯಪ್ಪ ಸಾಲ್ಯಾನ್, ಜೈ ವೀರಮಾರುತಿ ವ್ಯಾಯಾಮ ಶಾಳೆಯ ಅಧ್ಯಕ್ಷ ಸುರೇಶ್ ಶೆಟ್ಟಿ , ನಗರಸಭೆ ಮಾಜಿ ಸದಸ್ಯ ಭಗವಾನ್ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.

Exit mobile version