Site icon Ullalavani

ಕೆಇಬಿ ಉಪಕಚೇರಿಯಿಂದ ಲಕ್ಷಾಂತರ ಕಳವು

UN NETWORKS

ಕೋಟೆಕಾರು : ಕೆಇಬಿ ಉಪಕಚೇರಿಯ ಎಟಿಪಿ ಯಂತ್ರದಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂ.ಗಳನ್ನು ಕಳ್ಳರು ಕಳವುಗೈದಿರುವ ಘಟನೆ ರಾ.ಹೆ.66ರ ಕೋಟೆಕಾರು ಸಮೀಪವಿರುವ ಕಚೇರಿಯಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಎಟಿಪಿ ಯಂತ್ರದಲ್ಲಿದ್ದ ರೂ. 1,93,000 ನಗದು ಕಳವುಗೈಯ್ಯಲಾಗಿದೆ. ಶುಕ್ರವಾರ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ಹಣ ಎಟಿಪಿ ಯಂತ್ರದಲ್ಲಿತ್ತು. ಶನಿವಾರ ಬ್ಯಾಂಕ್ ರಜೆಯಿದ್ದ ಹಿನ್ನೆಲೆಯಲ್ಲಿ ನಗದು ಬ್ಯಾಂಕಿಗೆ ವರ್ಗಾವಣೆಗೊಳಿಸಿರಲಾಗಲಿಲ್ಲ. ಈ ನಡುವೆ ಶನಿವಾರ ತಡರಾತ್ರಿ ಶಟರ್ ಒಡೆದು ಒಳನುಗ್ಗಿದ ಕಳ್ಳರು ಎಟಿಪಿ ಯಂತ್ರದೊಳಗೆ ಇದ್ದ ನಗದು ಕಳವು ನಡೆಸಿದ್ದಾರೆ. ಇದೇ ವೇಳೆ ಕಚೇರಿಯಲ್ಲಿರುವ ಅಧಿಕಾರಿಗಳ ಕೊಠಡಿಯಲ್ಲಿಯೂ ಜಾಲಾಡಿದ ಕಳ್ಳರು ಅದರ ಬಾಗಿಲುಗಳನ್ನು ಮುರಿದಿದ್ದಾರೆ. ಭಾನುವಾರ ಬೆಳಿಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ಹತ್ಯಾರುಗಳು ಸ್ಥಳದಲ್ಲಿ ಪತ್ತೆಯಾಗಿದೆ.

ಕೆಇಬಿ ಇಂಜಿನಿಯರ್ ಪ್ರವೀಣ್ ಎಂಬವರು ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Exit mobile version