UN NETWORKS
ಪಾನೀರ್ : ಪಾನೀರ್ ಚರ್ಚ್ ಕೆಥೋಲಿಕ್ ಸಭಾ ವತಿಯಿಂದ ಚರ್ಚ್ ವ್ಯಾಪ್ತಿಯ ವಾರ್ಡ್‍ಗಳ ಗುರಿಕಾರರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಕ್ರಮ ಭಾನುವಾರ ಚರ್ಚ್‍ನ ಸಭಾಂಗಣದಲ್ಲಿ ನಡೆಯಿತು.
ಎಸ್‍ಸಿಸಿ ಸಂಸ್ಥೆಯ ನಿರ್ದೇಶಕ ರೆ.ಫಾ.ಜೋಕಿಮ್ ಫೆರ್ನಾಂಡಿಸ್, ಚರ್ಚ್‍ನ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕೆಥೋಲಿಕ್ ಸಭಾ ಉಳ್ಳಾಲ ವಲಯಾಧ್ಯಕ್ಷ ಅರುಣ್ ಮೊಂತೆರೋ ಮುಖ್ಯ ಅತಿಥಿಗಳಾಗಿದ್ದರು. ಕೆಥೋಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್, ಕಾರ್ಯದರ್ಶಿ ರುವಿತಾ ಮೆನೇಜಸ್, ನಿಯೋಜಿತ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಉಪಸ್ಥಿತರಿದ್ದರು. ಸಿಒಡಿಪಿ ಕಾರ್ಯಕರ್ತೆ ವಾಣಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.