Site icon Ullalavani

ದೇರಳಕಟ್ಟೆ: ಸಂತೋಷ ಮತ್ತು ಆರೋಗ್ಯ ವಿಚಾರ ಸಂಕಿರಣ

UN NETWORKS

ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ನಿಟ್ಟೆ ಉಷಾ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‍ನ ಆಶ್ರಯದಲ್ಲಿ ಆರೋಗ್ಯ ಮತ್ತು ಸಂತೋಷ ಕುರಿತಾಗಿ ವಿಚಾರ ಸಂಕಿರಣ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ಶನಿವಾರ ನಡೆಯಿತು.

smartcapture

ಯೂತ್ ರೆಡ್ ಕ್ರಾಸ್ ಸಂಯೋಜಕಿ ಲತಾ ಎಸ್. ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಕಾಶ್ ವಿ. ಪೈ ಯುವಕರಲ್ಲಿ ಒತ್ತಡ ಕಡಿತ ಮತ್ತು ಸಮಯ ನಿರ್ವಹಣೆಯ ಅಗತ್ಯತೆ ತಿಳಿಸಿ ಸಂತೋಷದಾಯಕ ಬದುಕಿಗೆ ವಿವಿಧ ಮಾರ್ಗೋಪಾಯ ತಿಳಿಸಿದರು.
ಆರ್ಥೊಡೋಂಟಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ.ಎಂ.ಎಸ್. ರವಿ ಉಪಸ್ಥಿತರಿದ್ದರು.ಯೂತ್ ರೆಡ್ ಕ್ರಾಸ್ ಘಟಕದ ಪ್ರೆಸಿಡೆಂಟ್ ರೋಸ್ಮೆರಿ ವಂದಿಸಿದರು.

ಸ್ಟೆಪಿ ಬಿ. ಪೆರಿಂಜಿಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version