UN NETWORKS
ನರಿಂಗಾನ : ವರ್ಕಾಡಿ-ನರಿಂಗಾನ ಗ್ರಾಮದ ಕಾರಣಿಕ ಕ್ಷೇತ್ರ ಶಾಂತಿಪಳಿಕೆ ಶ್ರೀ ಮಹಾಮಾಯ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದ ತಂತ್ರಿ, ವೇದಮೂರ್ತಿ ವರ್ಕಾಡಿ ಶ್ರೀ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ಸೋಮವಾರ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಮಾತನಾಡಿ ಹತ್ತು ಯುವಕರು ಸಿಕ್ಕರೆ ದೇಶ ಕಟ್ಟುತ್ತೇನೆ ಎಂಬ ವಿವೇಕಾನಂದರ ನುಡಿಯಂತೆ ಶ್ರೀಕ್ಷೇತ್ರದಲ್ಲಿ ಯುವಕರು ಹಾಗೂ ಮಾತೆಯರ ತಂಡ ಸ್ವಯಂ ಸೇವಕರಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ, ಕ್ಷೇತ್ರಕ್ಕೆ ಬೇಕಾದ ಪರಿಕರಗಳ ಸಂಗ್ರಹಕ್ಕೆ ಬಹಳಷ್ಟು ಕೊಡುಗೆ ನೀಡುವ ಮೂಲಕ ಕ್ಷೇತ್ರ ನಿರ್ಮಾಣದ ಕನಸು ನನಸಾಗುತ್ತಿದೆ ಸ್ವಯಂಸೇವಕರು ಹಾಗೂ ದಾನಿಗಳ ಸೇವಾಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.ಕ್ಷೇತ್ರದ ಮೊಕ್ತೇಸರ ಬಿ. ನಾರಾಯಣ ಶೆಟ್ಟಿ ಬಲೆತ್ತೋಡು ಮಾತನಾಡಿ ಮಹಾಮಾಯ ದೇವಸ್ಥಾನ ನಿರ್ಮಾಣ ಮೂಲಕ ಮಾತೆ ವಿಜೃಂಭಿಸುವ ಕಾರ್ಯಕ್ಕೆ ಇಳಿದಿದ್ದು ಅದು ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ, ಸೌಹಾರ್ದತೆ ನಿಸ್ವಾರ್ಥ ಸೇವೆಯ ಅಗತ್ಯತೆ ಇದ್ದು ಪೊಸೆಟಿವ್ ಎನರ್ಜಿ ಹೆಚ್ಚಿಸಬೇಕಿದೆ ಎಂದರು.
ಕ್ಷೇತ್ರದ ತಂತ್ರಿ ಶ್ರೀ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ವೈದಿಕ ವಿಧಿಗಳು ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಡಾ. ಎಸ್. ಎಸ್. ರಾಮ್, ಕಿನ್ಯ ಬೆಳರಿಂಗೆ ಭಂಡಾರಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶ್ರೀಶಾಸ್ತ ಕಿನ್ಯ, ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಪ್ರಸನ್ನ ಪಕ್ಕಳ ಬಲೆತ್ತೋಡು, ಜಯರಾಮ ರೈ ಮೂಡೂರು, ಚಂದ್ರಹಾಸ ಶೆಟ್ಟಿ ಮೋರ್ಲ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಬೆರ್ಮದೆ, ಸಂಚಾಲಕ ಹರೀಶ್ ಕನ್ನಿಗುಳಿ, ಎಡಂಬಲೆ ಗೋಪಾಲ ಭಟ್, ಮೂಡೂರು ಜಯರಾಮ ಶೆಟ್ಟಿ, ಶ್ರೀ ಮಿತ್ತಮೊಗರಾಯ ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಭಂಡಾರಮನೆ ಹಾಗೂ ಕಾರ್ಯದರ್ಶಿ ರಾಜೀವ ಎಸ್. ಶಾಂತಿಪಳಿಕೆ ಉಪಸ್ಥಿತರಿದ್ದರು.