ಉಳ್ಳಾಲ : ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅವರು ಶನಿವಾರ ಉಳ್ಳಾಲದಲ್ಲಿರುವ ಸೈಯ್ಯಿದ್ ಮದನಿ ದರ್ಗಾ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಅಬ್ದುಲ್ ರಶೀದ್ ಮಾತನಾಡಿ, ದೇವನ ಕೃಪೆಯಿಂದ ಚುನಾವಣೆಯಲ್ಲಿ ಗೆದ್ದು ಬಂದು ಜಾತಿ, ಧರ್ಮ ನೋಡದೆ ಸರ್ವರನ್ನೂ ಒಂದೇ ನೆಲೆಯಲ್ಲಿ ನೋಡಿಕೊಂಡು ಸೇವೆ ಸಲ್ಲಿಸಲು ಪಣ ಕೊಡಬೇಕು. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲು ಮುಂದಾಗಬೇಕು ಎಂದು ಹರಸಿದರು. ಮಿಥುನ್ ರೈ ದರ್ಗಾಕ್ಕೆ ಬರುವ ಮಾಹಿತಿ ಸಿಗುತ್ತಲೇ ಭಾರೀ ಸಂಖ್ಯೆಯ ಬೆಂಬಲಿಗರು, ಯುವಕರು ಕಾದು ಕುಳಿತಿದ್ದರು. ಈ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಗಾ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಧರ್ಮಗುರು ಉಸ್ಮಾನ್ ಫೈಝಿ ತೊಡಾರ್, ಪ್ರಮುಖರಾದ ಫಾರೂಕ್ ಉಳ್ಳಾಲ್, ಯೂಸುಫ್ ಉಳ್ಳಾಲ್, ಮುಖಂಡರಾದ ಸಂತೋಷ್ ಶೆಟ್ಟಿ ಅಸೈಗೋಳಿ, ಅಹಮ್ಮದ್ ಬಾವಾ ಕೊಟ್ಟಾರ, ಅಬ್ದುಲ್ ರಹ್ಮಾನ್ ಕೋಡಿಜಾಲ್, ಸುರೇಶ್ ಭಟ್ನಗರ, ಈಶ್ವರ್ ಉಳ್ಳಾಲ್,ಎವರೆಸ್ಟ್ ಮುಸ್ತಫಾ, ಎ.ಆರ್.ನಝೀರ್, ಸದಾಶಿವ ಉಳ್ಳಾಲ್, ಮೇಗಾ ಸಲೀಂ ಅಸೈಗೋಳಿ ಇನ್ನಿತರರು ಸಾಥ್ ನೀಡಿದರು.