UN NETWORKS
ಉಳ್ಳಾಲ: ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ 10ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮಾ.24 ರಂದು ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಬ್ರಹ್ಮಶ್ರೀ ಕೇಶವ ಜೋಗಿತ್ತಾಯ ಇವರ ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಯೆನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞ, ಯೆನೆಪೋಯ ಸಂಸ್ಥೆ ನಿರ್ದೇಶಕ ರಾಮಚಂದ್ರ ಶೆಟ್ಟಿ, ಫಜೀರು ಚರ್ಚ್ ಧರ್ಮಗುರು ಸುನೀಲ್ ವೇಗಸ್, ಪಿಲಾರು ಪಂಜಂದಾಯ ಬಂಟ ವೈದ್ಯನಾಥ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ ಭಾಗವಹಿಸಲಿದ್ದಾರೆ.