Site icon Ullalavani

ಪ್ರಾಮಾಣಿಕ ಶಿಕ್ಷಕ ವೃತ್ತಿಗೆ ನಿವೃತ್ತಿ ಇಲ್ಲ : ಅಬ್ದುಲ್ ರಶೀದ್

UN NETWORKS

ಉಳ್ಳಾಲ : ಶಿಕ್ಷಕ ವೃತ್ತಿಯು ಪವಿತ್ರವಾದುದು. ಶಿಕ್ಷಕರು ತಮ್ಮ ಬಳಿಗೆ ಬರುವ ಪ್ರತಿಯೊಂದು ಮಗುವಿನಲ್ಲೂ ಹೊಸತನವನ್ನು ಕಾಣುವರು. ತಾನು ಶಿಕ್ಷಕ ವೃತ್ತಿ ಪ್ರಾರಂಭಿಸಿದಗಿನಿಂದ ತನ್ನ ನಿವೃತ್ತಿಯವರೆಗೆ ತನ್ನ ಬಳಿ ಬರುತ್ತಿರುವ ಪ್ರತಿಯೊಂದು ವಿಧ್ಯಾರ್ಥಿಯಲ್ಲೂ ತನ್ನ ಮಕ್ಕಳನ್ನು ಕಾಣುವ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಉಳ್ಳಾಲ ಕ್ಲಸ್ಟರಿನಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಧಾನದಿಂದ ಮಾತನಾಡುತ್ತಾ ಇಂತಹ ಪವಿತ್ರ ವೃತಿಯಿಂದ ಸರಕಾರದ ನಿಯಮದಂತೆ ನಿಯಮದ ಚೌಕಟಿನಿಂದ ಹೊರಬಂದ ಶಿಕ್ಷಕರು ತಮ್ಮ ಪರಿಸರದ ದುಷ್ಠ ಶಕ್ತಿಗಳನ್ನು ಶಿಷ್ಟಾರನ್ನಾಗಿ ಮಾಡುವ ಜವಾಬ್ದಾರಿ ತೆಗೆದುಕೊಂಡು ಸುಂದರ ಸೌಹಾರ್ದತೆ ಬಾಳಿಗೆ, ಭಾರತ ನಿರ್ಮಾಣಕ್ಕೆ ಕಾರಣರಾಗಿರಿ ಎಂದರು.ಟಿಪ್ಪು ಸುಲ್ತಾನ್ ವಿದ್ಯಾ ಸಂಸ್ಥೆಯಿಂದ ನಿವೃತ್ತಿಯಾದ ಆಲಿಸ್ ಮೊಂತೇರೋ ಹಾಗೂ ಶೀತಾ ಮತ್ತು ಬಿ. ಎಂ. ವಿದ್ಯಾ ಸಂಸ್ಧೆಯಿಂದ ನಿವೃತ್ತರಾದ ಸಿಂಥಿಯಾ ಲಸ್ರಾದೋ, ಕ್ಲಮೆಂಟಿನ ಪ್ರಭಾವತಿ, ವಿಮಲಾ ಮಾರ್ಗರೇಟ್ ಕರ್ಕೇರಾ, ನೂತನ್ ಜ್ಯೋತಿ ಅವರನ್ನು ಉಳ್ಳಾಲ ಪುರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ ಅವರು ಸನ್ಮಾನಿಸಿದರು.

ಟಿಪ್ಪು ಸುಲ್ತಾನ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಎಂ.ಹೆಚ್. ಮಾಲಾರ್ ಹಾಗೂ ಬಿ. ಎಂ. ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ನಳಿನಿ ಅಮ್ಮನ್ನರವರು ನಿವೃತ್ತ ಶಿಕ್ಷಕರ ಬಗ್ಗೆ ಪ್ರಶಂಶನಾ ನುಡಿಗಳನ್ನಾಡಿದರು.ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು ಮೊಗವೀರ ಶಾಲೆಯ ಮುಖ್ಯ ಶಿಕ್ಷಕಿ ವೇದಾವತಿ, ಸರಕಾರಿ ಮಾದರಿ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ, ಮೇಲಂಗಡಿ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಮೋನಿಕಾ ಮಸ್ಕರೇನಸ್, ಒಂಬತುಕೆರೆಯ ಮುಖ್ಯ ಶಿಕ್ಷಕಿ ಪುಷ್ಪಾ, ಸರಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಉಪಸ್ಧಿತರಿವರು.ಉಳ್ಳಾಲ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ನಳಿನಿ ಸ್ವಾಗತಿಸಿದರು.

ಮೊಗವೀರ ಶಾಲೆಯ ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು. ಒಂಬತ್ತು ಕೆರೆಯ ಸಹಾಯಕ ಶಿಕ್ಷಕಿ ಮೋಹಿನಿ ವಂದಿಸಿದರು.

Exit mobile version