ದೇರಳಕಟ್ಟೆ : “ಬೇಸಿಕ್ಸ್ ಆಫ್ ರಿಸರ್ಚ್” ಪ್ರಾದೇಶಿಕ ಮಟ್ಟದ ವಿಚಾರಗೋಷ್ಠಿ
UllalaVani
UN NETWORKS
ದೇರಳಕಟ್ಟೆ : ದೇರಳಕಟ್ಟೆಯ ನಿಟ್ಟೆ ಉಷಾ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‍ನ ಸಮುದಾಯ ಶುಶ್ರೂಷ ವಿಭಾಗದ ಬೋಧಕರು ಹಾಗೂ ಮೊದಲ ವರ್ಷದ ಸ್ನಾತಕೋತ್ತರ ನಸಿಂಗ್ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ಬೇಸಿಕ್ಸ್ ಆಫ್ ರಿಸರ್ಚ್ ಬಗ್ಗೆ ಪ್ರಾದೇಶಿಕ ಮಟ್ಟದ ವಿಚಾರಗೋಷ್ಠಿ ನಡೆಯಿತು.
ಸಮುದಾಯ ವಿಭಾಗದ ಪ್ರೊಫೆಸರ್ ಡಾ. ಅಂಕಿತಾ ಮೆನೊನಾ ಮಾತನಾಡಿ ಉನ್ನತ ಶಿಕ್ಷಣದಲ್ಲಿ ನವೀಕೃತ ಸಂಶೋಧನೆ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳುವ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.ಮೂಡುಬಿದಿರೆಯ ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರೊ. ಗಾನಾವತಿ ವೀಕ್ಷಕರಾಗಿ ಭಾಗವಹಿಸಿದ್ದರು.ಪ್ರಿನ್ಸಿಪಾಲ್ ಪ್ರೊ. ಡಾ. ಫಾತಿಮ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಿನ್ಸಿನ್ಸಿಪಾಲ್ ಪ್ರೊ. ಬಿ. ಸಬಿತಾ ನಾಯಕ್, ಸಮುದಾಯ ಶುಶ್ರೂಷ ವಿಭಾಗ ಮುಖ್ಯಸ್ಥೆ ಡಾ. ನೀತಾ ಕಾಮತ್ ಹಾಗೂ ಉಪನ್ಯಾಸಕಿ ಜಿನ್ಸ್ ವಿ. ಜಾನ್ ಉಪಸ್ಥಿತರಿದ್ದರು.
ನರ್ಸಿಂಗ್ ವಿದ್ಯಾರ್ಥಿನಿ ಜೋಯ್ಸ್ ಸ್ವಾಗತಿಸಿದರು. 85ಶುಶ್ರೂಷಾ ಸಿಬ್ಬಂದಿ ಪಾಲ್ಗೊಂಡಿದ್ದರು.