ತೊಕ್ಕೊಟ್ಟು ಪ್ರೋ ಕಬ್ಬಡ್ಡಿ ಆಳ್ವಾಸ್ ಮೂಡಬಿದ್ರೆ ಚಾಂಪಿಯನ್
UllalaVani
UN NETWORKS
ತೊಕ್ಕೊಟ್ಟು : ಆರ್.ವಿ.ಪ್ರೆಂಡ್ಸ್ ತೊಕ್ಕೊಟ್ಟು ಇದರ ವತಿಯಿಂದ, ದ.ಕ.ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್ ನ ಸಹಯೋಗದಲ್ಲಿ ದ.ಕ.ಜಿಲ್ಲಾ ಮಟ್ಟದ ಮುಕ್ತ ಪ್ರೋ ಕಬ್ಬಡ್ಡಿ ಪಂದ್ಯಾಟ ತೊಕ್ಕೊಟ್ಟಿನ ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆಯಿತು.
ಕಬ್ಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಚಿರುಂಭ ಭಗವತಿ ಕ್ಷೇತ್ರದ ಅರ್ಚಕ ಮಂಜಪ್ಪ ಕಾರ್ನವರ್, ಕ್ರೀಡಾಂಗಣ ಉದ್ಘಾಟನೆಯನ್ನು ವೀರ ಮಾರುತಿ ವ್ಯಾಯಾಮ ಶಾಲಾ ಶಿಕ್ಷಕ ವಿಠಲ್ ಶ್ರೀಯಾನ್ ನೆರವೇರಿಸಿದರು. ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ಚಿರುಂಭ ಭಗವತಿ ಕ್ಷೇತ್ರದ ಅದ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್ ನ ಕಾರ್ಯಾದ್ಯಕ್ಷ ರತನ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಉಪಾದ್ಯಕ್ಷರಾದ ಕೆ.ಟಿ.ಸುವರ್ಣ, ಉಳ್ಳಾಲ ಗ್ರಾಮಾಂತರ ಅದ್ಯಕ್ಷರಾದ ಸುರೇಶ್ ಭಟ್ನಗರ, ಯುವ ಜನ ಸೇವಾ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜ, ಪುರಸಭೆಯ ಮಾಜಿ ಅದ್ಯಕ್ಷ ಫಾರೂಕ್ ಯು.ಹೆಚ್, ಕುಂಪಲ ಆದಿಶಕ್ತಿ ಕ್ರಿಕೆಟರ್ಸ್ ನ ಅದ್ಯಕ್ಷ ಪ್ರಕಾಶ್ ಕುಂಪಲ, ಗುತ್ತಿಗೆದಾರ ಜಯಂತ್ ಕೊಂಡಾಣ, ಕ್ಲಿಕ್ ಕ್ಯಾಟರ ರ್ಸ್ ನ ಚಂದ್ರಕಾಂತ್ ತೊಕ್ಕೊಟ್ಟು, ಉದ್ಯಮಿ ಅಶ್ರಫ್ ಮಂಜೇಶ್ವರ, ಮಹಮ್ಮದ್ ತ್ವಾಹ, ಅಲ್ತಾಫ್ ಮಂಚಿಲ, ನ್ಯೂ ಜನತಾ ಬಾಬುಗುಡ್ಡೆಯ ವಿಜಯ ಪಂಪ್ ವೆಲ್, ಪೆರ್ಮನ್ನೂರು ಸ್ಪೋರ್ಟ್ಸ್ ಕ್ಲಬ್ ನ ನವೀನ್ ಡಿ ಸೋಜ ಆಗಮಿಸಿದ್ದರು. ತೀರ್ಪುಗಾರರಾದ ರಾಧಾಕೃಷ್ಷ ರೈ, ರತೀಶ್ ತೊಕ್ಕೊಟ್ಟು, ಅಶೋಕ್ ಅಂಚನ್, ಕಬ್ಬಡ್ಡಿ ಸಂಘಟಕರಾದ ರೋಹನ್ ತೊಕ್ಕೊಟ್ಟು, ವಿಶ್ವನಾಥ್ ತೊಕ್ಕೊಟ್ಟು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರೋ ಕಬ್ಬಡ್ಡಿಯ ಗುಜರಾತ್ ಫೋರ್ಚೂನ್ ತಂಡದ ಆಟಗಾರ ಸಚಿನ್ ಸುವರ್ಣರನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಆಳ್ವಾಸ್ ಮೂಡಬಿದ್ರೆ ಪ್ರಥಮ, ತತ್ವಮಸಿ ಬಗಂಬಿಲ ದ್ವಿತೀಯ, ವಿದ್ಯಾಂಜನೇಯ ಉಳ್ಳಾಲ ತೃತೀಯ, ಭದ್ರಾ ವಾರಿಯರ್ಸ್ ಬಂಟ್ವಾಳ ಚತುರ್ಥ ಪ್ರಶಸ್ತಿಗಳಿಸಿತು. ಉತ್ತಮ ದಾಳಿಗಾರನಾಗಿ ಭದ್ರಾ ವಾರಿಯರ್ಸ್ ನ ನೀತು ಶೆಟ್ಟಿ, ಉತ್ತಮ ಹಿಡಿತಗಾರನಾಗಿ ತತ್ವಮಸಿ ಬಗಂಬಿಲದ ಲಿಖಿತ್ ಕುಂಪಲ, ಸವ್ಯಸಾಚಿ ಪ್ರಶಸ್ತಿ ಆಳ್ವಾಸ್ ನ ಭರತ್ ರವರು ವೈಯುಕ್ತಿಕ ಪ್ರಶಸ್ತಿ ಪಡೆದರು.ಪ್ರವೀಣ್.ಎಸ್.ಕುಂಪಲ, ದಿವಾಕರ ಉಪ್ಪಳ, ಕಾರ್ಯಕ್ರಮ ನಿರೂಪಿಸಿ, ವೀಕ್ಷಕ ವಿವರಣೆ ನೀಡಿದರು.