Site icon Ullalavani

ತೊಕ್ಕೊಟ್ಟು : ಬಿ.ಜೆ.ಪಿ.ಉಳ್ಳಾಲ ಶಕ್ತಿಕೇಂದ್ರದ ಸಭೆ

UN NETWORKS

ತೊಕ್ಕೊಟ್ಟು : ಎಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಲು ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಬೇಕು.ನರೇಂದ್ರ ಮೋದಿಯವರ ಸರಕಾರದ ಸಾಧನೆ, ಬಡಜನರಿಗೆ ನೀಡಿದ ಸವಲತ್ತುಗಳನ್ನು, ಯೋಜನೆಯನ್ನು ಮತದಾರರಿಗೆ ತಿಳಿಸಬೇಕು.ಉಳ್ಳಾಲ ಮಹಾಶಕ್ತಿ ಕೇಂದ್ರದಲ್ಲಿ ಪಕ್ಷಕ್ಕೆ ಅತೀ ಹೆಚ್ಚು ಮತ ಬರುವಂತಾಗಲು ತಂತ್ರ ರೂಪಿಸಬೇಕೆಂದು ಬಿ.ಜೆ.ಪಿ.ಮಂಗಳೂರು ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.ಅವರು ತೊಕ್ಕೊಟಿನ ಬಿ.ಜೆ.ಪಿ‌. ಕಛೇರಿಯಲ್ಲಿ ಉಳ್ಳಾಲ ಮಹಾ ಶಕ್ತಿಕೇಂದ್ರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರದ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಉಪಾಧ್ಯಕ್ಷರಾದ ಯಶವಂತ್ ಅಮೀನ್, ಪ್ರಕಾಶ್ ಸಿಂಫೋನಿ, ಕಾರ್ಯದರ್ಶಿ ಗಳಾದ ರಾಮಕೃಷ್ಣ ಪಟ್ಟೊರಿ, ಹೇಮಂತ್ ಶೆಟ್ಟಿ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಪ್ರ.ಕಾರ್ಯದರ್ಶಿ ಪ್ರಶಾಂತ್ ಕಾಪಿಕಾಡ್, ಶಕ್ತಿ ಕೇಂದ್ರದ ಪ್ರಮುಖರು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Exit mobile version