Site icon Ullalavani

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ

UN NETWORKS

ಪಜೀರ್ : ಸಿ.ಒ.ಡಿ.ಪಿ. ಮಂಗಳೂರು ಪ್ರವರ್ತಿತ ಮಹಾಸಂಘದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಪರಿಸರ ಸ್ವಚ್ಛತಾ ಕಾರ್ಯಕ್ರಮ ಪಜೀರ್ ನಲ್ಲಿ ಶುಕ್ರವಾರ ನಡೆಯಿತು.

ಪಜೀರ್ ಮೆರ್ಸಿಯಮ್ಮ ಮಾತಾ ದೇವಾಲಯದ ಧರ್ಮಗುರು ವಂ. ಸುನಿಲ್ ವೇಗಸ್ ಅವರು ಪ್ಲಾಸ್ಟಿಕ್ ಬ್ರಿಕ್ ಬೆಂಚನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.ಫ್ರಾನ್ಸಿಸ್ ಅಸ್ಸಿಸಿ ದಲ್ಮೇಡ ಮಾತನಾಡಿ, ಮಹಿಳೆ ಇಲ್ಲದ ಮನೆ ವ್ಯವಸ್ಥಿತವಾಗಿರಲು ಸಾಧ್ಯವಿಲ್ಲ. ಮಹಿಳೆಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಹೋಗುತ್ತದೆ. ಪುರುಷನಿಗೆ ಶಿಕ್ಷಣ ನೀಡಿದರೆ ಅದು ಒಬ್ಬರಲ್ಲೇ ಉಳಿಯುತ್ತದೆ ಎಂದರು.ಸಂತ ಜೋಸೆಫ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಇನೆಟ್ ಸಿಸ್ಟರ್ ವಿಜಯ್, ಪಜೀರ್ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಫಿ ಮತ್ತು ಫ್ಲೋರಿನ್, ಸಿಒಡಿಪಿ ಸಂಯೋಜಕಿ ರೀಟಾ ಡಿಸೋಜ ಹಾಗೂ ಕಾರ್ಯಕರ್ತೆ ಗುಲಾಬಿ ಮೊಂತೆರೋ ಉಪಸ್ಥಿತರಿದ್ದರು.

ಬೆನಾರ್ಡ್ ಸ್ವಾಗತಿಸಿದರು. ಸ್ನೇಹಾ ಮಹಾಸಂಘದ ಅಧ್ಯಕ್ಷೆ ಲವಿನದಾಂತಿ ಕಾರ್ಯಕ್ರಮ ನಿರೂಪಿಸಿದರು.

Exit mobile version