Site icon Ullalavani

ಐಕ್ಯತೆ ಮತ್ತು ಸಾಮರಸ್ಯೆತೆಯೊಂದಿಗೆ ಸಮಾಜ ಕಟ್ಟೋಣ : ಬಹು ಸಿದ್ದೀಕ್ ಅಝ್ಹರಿ ಪಯ್ಯನ್ನೂರು

UN NETWORKS

ಕೊಣಾಜೆ: ಇಂದಿನ ಯುವಜನತೆ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾಧ್ಯಮಗಳನ್ನು ಪರಸ್ಪರರಲ್ಲಿ ದ್ವೇಷ ಹರಡುವ ಕಾರ್ಯಕ್ಕೆ ಉಪಯೋಗಿಸುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಸಮಸ್ತದ ನೇತಾರರನ್ನು ಮಾದರಿಯಾಗಿಸಬೇಕಾಗಿದೆ ಎಂದು ಖ್ಯಾತ ವಾಗ್ಮಿ ಬಹು ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಹೇಳಿದರು.

ಅವರು ನಡುಪದವಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್‍ಕೆಎಸ್‍ಎಸ್‍ಎಫ್ ನಡುಪದವು ಪಟ್ಟೋರಿ ಶಾಖೆ ಇದರ ವತಿಯಿಂದ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ಸಮಸ್ತ ಅಗಲಿದ ನೇತಾರರ ಅನುಸ್ಮರಣಾ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದರು.ಬಹು ಅಸಯ್ಯಿದ್ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯರವರ ದುವಾದೊಂದಿಗೆ ಆರಂಭಗೊಂಡ ಸಭೆಯಲ್ಲಿ ಶೈಖುನಾ ಅಲ್ ಹಾಜ್ ಎಂಪಿ.ಮಹಮ್ಮದ್ ಮುಸ್ಲಿಯಾರ್ ಪಟ್ಟೋರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಸ್ತ ಕರ್ನಾಟಕ ಜಂಯಿಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಸಮಾರಂಭವನ್ನು ಉದ್ಘಾಟಿಸಿದರು. ಇಬ್ರಾಹಿಂ ಭಾಖವಿ ಕೆ.ಸಿ.ರೋಡ್, ರಿಯಾಝ್ ರಹ್ಮಾನಿ ಕಿನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್, ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕುರಾನ್ ಕಂಠಪಾಠ ಮಾಡಿದ ಹಾಫಿಝ್ ಉನೈಸ್‍ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ನಡುಪದವು, ಹಾಜಿ ಎ.ಎಚ್.ಅಬ್ದುಲ್ ಖಾದರ್, ಪಟ್ಟೋರಿ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಲಾಡ, ನಡುಪದವು ಮಸೀದಿ ಅಧ್ಯಕ್ಷ ಅಬ್ದುಲ್ ನಾಸೀರ್, ಎನ್.ಎಸ್.ನಾಸೀರ್ ನಡುಪದವು, ಇಬ್ರಾಹಿಂ ಕೊಣಾಜೆ, ಪುತ್ತು ಹಾಜಿ ಇಸ್ಮಾಯಿಲ್, ಸಿ.ಎಂ.ಶರೀಫ್ ಪಟ್ಟೋರಿ, ಅಬ್ದುಲ್ ರಹ್ಮಾನ್ ಕಲ್ಲೆಗುಂಡಿ, ಸಿದ್ದೀಕ್ ನಡುಪದವು, ಎನ್.ಎಸ್.ಅಬ್ದುಲ್ಲಾ, ಎನ್.ಎಂ.ಅಬ್ದುಲ್ ರಹಿಮಾನ್, ಹಮೀದ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.ನಝೀರ್ ದಾರಿಮಿ ಸ್ವಾಗತಿಸಿ, ಹಮೀದ್ ಅಝ್ಹರಿ ಪಟ್ಟೋರಿ ವಂದಿಸಿದರು. ಇರ್ಫಾನ್ ಮೌಲವಿ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version