Site icon Ullalavani

ರಥಬೀದಿ: “ತೆಲಿಕೆ 2019 ” ಹಾಸ್ಯ ಪ್ರಹಸನ ಪ್ರದರ್ಶನ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ಪ್ರಥಮ

UN NETWORKS

ರಥಬೀದಿ : ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ದ.ಕ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಆಯ್ದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ” ತೆಲಿಕೆ 2019 ” ಎಂಬ ಹಾಸ್ಯ ಪ್ರಹಸನ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ತಂಡ `ತೆಲಿಕೆ 2019′ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

ದ.ಕ. ಮತ್ತು ಉಡುಪಿ ಜಿಲ್ಲೆಯ 14ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ದ್ವಿತೀಯ ಸ್ಥಾನ, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ತೃತೀಯ, ಮಂಗಳೂರಿನ ಪದುವಾ ಪ್ರಥಮದರ್ಜೆ ಕಾಲೇಜು ಚತುರ್ಥ ಸ್ಥಾನ ಪಡೆದುಕೊಂಡು ಖಾಸಗಿ ವಾಹಿನಿ ನಡೆಸುವ ಸ್ಪರ್ಧೆಗೆ ನೇರ ಪ್ರವೇಶ ಪಡೆದುಕೊಂಡಿದೆ.ಖ್ಯಾತ ಹಾಸ್ಯ ನಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾಂಡೇಶ್ವರ್ ತೆಲಕೆ- 2019 ಚಾಲನೆ ನೀಡಿದರು.ಪ್ರಿನ್ಸಿಪಾಲ್ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಕಲಾವಿದರಾದ ರಂಜನ್, ಸಂಪತ್, ಸಪ್ತಾ ಪಾವೂರು ಮತ್ತು ಪ್ರಕಾಶ್ ತೂಮಿನಾಡು, ಸಂಘದ ಸಂಯೋಜಕ ಪ್ರೊ. ಶೇಷಪ್ಪ ಕೆ, ಸಂಘದ ಪ್ರಧಾನ ಕಾರ್ಯದರ್ಶಿ ಧೀರಜ್ ಕುಮಾರ್, ತೆಲಿಕೆ- 2019 ಸಂಚಾಲಕ ಅಭಿಲಾಷ್ ಬಜ್ಪೆ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿಗಳಾದ ಲಾವಣ್ಯ ಹಾಗೂ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ನಿಖಿಲ್ ಕೆ.ಸಿ. ವಂದಿಸಿದರು. ಕಾರ್ಯಕ್ರಮದಲ್ಲಿ ಅರುಣ್‍ಚಂದ್ರ ಬಿ.ಸಿ. ರೋಡ್, ಉಷಾ ದೇವರಾಜ್ ಹಾಗೂ ರಕ್ಷಣ್ ಮಾಡೂರು ತೀರ್ಪುಗಾರರಾಗಿ ಸಹಕರಿಸಿದರು.

Exit mobile version