UN NETWORKS
ಸೋಮೇಶ್ವರ : ಸೋಮೇಶ್ವರ ಬಾಸ್ರಿತ್ತಾಯರಬೈಲ್ ಶ್ರೀ ರಕ್ತೇಶ್ವರೀ ದೈವಸ್ಥಾನದ ವಾರ್ಷಿಕ ನೇಮೋತ್ಸವ, ರಕ್ತೇಶ್ವರಿ ಬಳಗದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಕ್ತೇಶ್ವರಿ ದೇವಸ್ಥಾನದ ತಂತ್ರಿ ವೇದಮೂರ್ತಿ ಬ್ರ್ರಹ್ಮಶ್ರೀ ಸುಬ್ರಹ್ಮಣ್ಯ ಬಾಸ್ರಿತಾಯರು, ರಕ್ತೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ರಕ್ತೇಶ್ವರಿ ಬಳಗದ ಸದಸ್ಯರ ಕೆಲಸ ಮತ್ತು ಉಮೇದುವಾರಿಕೆ ಕಾರಣವಾಗಿದೆ ಎಂದು ಆಶೀರ್ವಚನ ನೀಡಿದರು.
ರಕ್ತೇಶ್ವರಿ ಬಳಗದ ಮಾಜಿ ಅಧ್ಯಕ್ಷ ರವಿಶಂಕರ ಸೋಮೇಶ್ವರ ಸನ್ಮಾನ ಪತ್ರ ಓದಿದರು. ಶ್ರೀ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಮದಾಸ್ ಸೋಮೇಶ್ವರ, ಗೌರವಾಧ್ಯಕ್ಷ ಅಜಿತ್‍ಕುಮಾರ್ ಶೆಟ್ಟಿ ಅಧ್ಯಕ್ಷ ಚಂದ್ರಶೇಖರ್ ಪೆರಿಬೈಲ್, ಮಾಜಿ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಹಿರಿಯ ಸದಸ್ಯ ಪುರುಷೋತ್ತಮ ಹಾಗೂ ಕಾರ್ಯದರ್ಶಿ ವರುಣ್ ರಾಜ್ ಉಪಸ್ಥಿತರಿದ್ದರು.
ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.