Site icon Ullalavani

ಕೊಲ್ಯ : ಬಿಜೆಪಿ ವತಿಯಿಂದ ಪ್ರಬದ್ಧರ ಗೋಷ್ಠಿ

UN NETWORKS

ಕೊಲ್ಯ: ಮಂಗಳೂರು ವಿಧಾನಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಯಿಂದ ಪ್ರಬುದ್ಧರ ಕೊಲ್ಯ ಸೌಭಾಗ್ಯ ಭವನದಲ್ಲಿ ಗುರುವಾರ ಗೋಷ್ಠಿ ನಡೆಯಿತು.

ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಉದ್ಘಾಟಿಸಿದರು. ಬಿಜೆಪಿ ಕ್ಷೇತ್ರಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಗಾರರಾಗಿ ರಾಜ್ಯ ಬಿ.ಜೆ.ಪಿ.ಸಹ ವಕ್ತಾರೆ ಮಾಳವಿಕ ಭಾಗವಹಿಸಿದ್ದರು. ಕ್ಷೇತ್ರ ಚುನಾವಣಾ ಪ್ರಭಾರಿ ರಾಧಾಕೃಷ್ಣ ರೈ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್, ಚುನಾವಣಾ ಸಂಚಾಲಕ ಚಂದ್ರಶೇಖರ ಉಚ್ಚಿಲ್, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.ಕ್ಷೇತ್ರ ವ್ಯಾಪ್ತಿಯ ವಿವಿಧ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

Exit mobile version